ಬಳ್ಳಾರಿ: ಧ್ರುವ ಸರ್ಜಾ ಅಭಿಮಾನಿಗಳ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಮತ್ತು ಸಮಾಜ ಸೇವಕರಾದ ಎಂ.ಜಿ. ಕನಕ ಅವರ ಪುತ್ರನಾದ ಎಂ.ಜಿ. ಪ್ರಥಮ್ ಗೌಡ ರವರ ಮೂರನೇ ವರ್ಷದ ಹುಟ್ಟುಹಬ್ಬವನ್ನು ಬಳ್ಳಾರಿ ತಾಲೂಕಿನ ಸಂಗನಕಲ್ ಗ್ರಾಮದ ಆದರ್ಶ ಹಿರಿಯರ ವೃದಾಶ್ರಮದಲ್ಲಿ ಮಂಗಳವಾರ ಆಚರಿಸಲಾಯಿತು.
ಹುಟ್ಟು ಹಬ್ಬದ ಸಂದರ್ಭದಲ್ಲಿ ಆಶ್ರಮದ ಹಿರಿಯರ ಆಶೀರ್ವಾದ ಪಡೆದು ಕೇಕ್ ಕತ್ತರಿಸಿ ಹಿರಿಯರಿಗೆ ಹಣ್ಣು ಹಂಪಲು, ಹೋಳಿಗೆ ಊಟ ಹಾಗೂ ಪ್ರಾಣಿಗಳಿಗೆ ಹಣ್ಣು-ಹಂಪಲು, ಬ್ರೆಡ್ ವಿತರಣೆ ಮಾಡುವ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ಎಂ.ಜಿ.ಕನಕ ಮಾತನಾಡಿ ಯಾವುದೇ ಆಮಿಷಗಳಿಗೆ ಒಳಗಾಗದೇ ಎಲೆ ಮರೆ ಕಾಯಿಯಂತೆ ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡುತ್ತಿರುವುದನ್ನು ನಮ್ಮ ಸುದ್ದಿ ವಾಹಿನಿಗಳು ಗುರುತಿಸಿ ಬೆಳಕಿಗೆ ತರುತ್ತಿವೆ ಎಂದು ಜಿಲ್ಲಾ ಅಧ್ಯಕ್ಷ ಎಂ.ಜಿ. ಕನಕ ಹೇಳಿದರು.
ಈ ವೇಳೆ ಸಂಸ್ಥೆಯ ಮುಖ್ಯಸ್ಥರಾದ ವೆಂಕೋಬ ರವರು ಮಾತನಾಡಿ, ಕಳೆದ 12 ವರ್ಷಗಳಿಂದ ಸಂಘ ಸಂಸ್ಥೆಗಳಿಂದ ಹಾಗೂ ವೈಯಕ್ತಿಕವಾಗಿ ಅನ್ನದಾನ ಮಾಡುತ್ತಿದ್ದಾರೆ ಹಾಗೂ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾ ಬಂದಿದ್ದಾರೆ. ಆ ದೇವರು ಕುಟುಂಬದವರಿಗೂ ಸುಖ-ಸಂತೋಷ, ಆಯುಷ್ಯ-ಆರೋಗ್ಯ ಕೊಟ್ಟು ಕಾಪಾಡಲೆಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಆಶ್ರಮದ ಹಿರಿಯರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ (ಯುವಸೈನ್ಯ) ರಾಜ್ಯಾಧ್ಯಕ್ಷರಾದ ಯು.ಹನುಮೇಶ್, ನಗರಧ್ಯಕ್ಷರಾದ ಉಮಾರ್ ಫಾರೂಕ್, ಸಂಘಟನಾ ಕಾರ್ಯದರ್ಶಿಯಾದ ಅರುಣ್ ಕುಮಾರ್ ಹಾಗೂ ಪದಾಧಿಕಾರಿಗಳಾದ ಚೇಳ್ಳಗುರ್ಕಿ ತಿಪ್ಪೇರುದ್ರ, ನಾಗರಾಜ್, ಆಪ್ತಮಿತ್ರ ಭಾಷಾ, ಯೋಗೇಶ್ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.