ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ : ನಗರದ ಶ್ರೀ ಕೋಟೆ ಮಲ್ಲೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದೇವಸ್ಥಾನದ ಆವರಣ ಸ್ಥಳದಲ್ಲಿ ಮಾಜಿ ಸಚಿವರಾದ ಶ್ರೀರಾಮುಲು ಅವರು ಪಾಲ್ಗೊಂಡು ಭಕ್ತಾದಿಗಳಿಗೆ ಒಗ್ಗಣಿ, ಮಿರ್ಚಿ ತಯಾರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸೋಮಶೇಖರ್ ರೆಡ್ಡಿ ಅವರು ಆಡಳಿತ ಮಂಡಳಿ ಸದಸ್ಯರು ಶ್ರೀರಾಮುಲು ಅವರ ಜೊತೆಯಲ್ಲಿ ಕೈಜೋಡಿಸಿದರು. ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಒಗ್ಗಣಿ, ಮಿರ್ಚಿ ವಿತರಣೆ ಮಾಡಲಾಯಿತು.