ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: ನಗರದ ಕೆ ಸಿ ರೋಡ್ ನಲ್ಲಿ ಇರುವ ವೈದಿಕ ಮಾರ್ಟ್ ವತಿಯಿಂದ ಶುಕ್ರವಾರದಂದು ಶಿವರಾತ್ರಿ ಹಬ್ಬದ ಪ್ರಯುಕ್ತ ಪೂಜಾ ಸಾಮಗ್ರಿಗಳಾದ ಪಂಚಾಮೃತ, ಬಿಲ್ವ ಪತ್ರಿ, ಹಾಗೂ ಉತ್ತರಾಣಿ ಕಡ್ಡಿಯನ್ನು ಉಚಿತವಾಗಿ ನೀಡಲಾಯಿತು.
ಇದೇ ಸಂಧರ್ಭದಲ್ಲಿ ಬುಡಾ ಅಧ್ಯಕ್ಷರಾದ ಅಂಜನೇಯಲು ಅವರು ಪೂಜಾ ಸಾಮಗ್ರಿಗಳನ್ನು ವಿತರಿಸಿದರು.