ಬೆಳಗಾಯಿತು ವಾರ್ತೆ| www.belagayithu.in
ಬೆಂಗಳೂರು: ಭಾರತ ಜಗತ್ತಿನಲ್ಲಿ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ ಎಂಬುದು ಒಂದು ಕಡೆಯಾದರೆ, ದೇಶದಲ್ಲಿ ಇನ್ನೂ ಅನೇಕ ಸಂಖ್ಯೆಯಲ್ಲಿರುವ ಅನಕ್ಷರಸ್ಥರು, ಬಡವರು, ಬುಡಕಟ್ಟು, ಆದಿವಾಸಿ ಜನ ಪಡಬಾರದ ಪಡಿಪಾಟಲುಗಳನ್ನು ಪಡುತ್ತಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಅಷ್ಟೇ ಅಲ್ಲದೇ ಗ್ರಾಹಕರೊಂದಿಗೆ ದೇಶದ ಸರ್ಕಾರಿ, ಅರೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಅನೇಕ ಸಿಬ್ಬಂದಿ ಸರಿಯಾಗಿ ಸ್ಪಂದಿಸುವುದಿಲ್ಲ ಮತ್ತು ಅದರಲ್ಲೂ ಅನಕ್ಷರಸ್ಥರೊಂದಿಗೆ ಅವರ ವರ್ತನೆಗಳು ಎಷ್ಟು ಕೆಟ್ಟದಾಗಿ ಇರುತ್ತವೆ ಎಂಬುದೂ ಸಹ ಅನೇಕ ಸಲ ಸಾಬೀತಾಗಿದೆ.
ಅನಕ್ಷರಸ್ಥ ಬುಡಕಟ್ಟು ವ್ಯಕ್ತಿಯೊಬ್ಬ ಬ್ಯಾಂಕ್‌ನಲ್ಲಿ ತನ್ನ ಮೃತ ಸಹೋದರಿ ಹೆಸರಲ್ಲಿದ್ದ ಠೇವಣಿ ಹಣ ಹಿಂಪಡೆಯಲಾಗದೇ ಕಡೆಗೆ ಸಹೋದರಿಯ ಅಸ್ಥಿಪಂಜರವನ್ನೇ ತಂದು ಬ್ಯಾಂಕ್ ಮುಂದೆ ಇಟ್ಟಿದ್ದ ಘಟನೆ ಒಡಿಶಾದಲ್ಲಿ ಈಚೆಗೆ ನಡೆದಿದೆ.
ಈ ಘಟನೆ ಕೇವಲ ಒಡಿಶಾ ಅಷ್ಟೇ ಅಲ್ಲದೆ ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ. ಮೇಲೆ ಹೇಳಿರುವ ಎರಡು ನಿದರ್ಶನಗಳಿಗೆ ಕನ್ನಡಿ ಹಿಡಿದಂತಾಗಿದೆ.





