ಬೆಳಗಾಯಿತು ವಾರ್ತೆ| www.belagayithu.in
ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟ ಆಕ್ಸ್‌ಫರ್ಡ್ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸೌಜನ್ಯ ಕಂದಕೂರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸಿ, ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
ವಿದ್ಯಾರ್ಥಿನಿ ಸೌಜನ್ಯ ನೆರೆಯ ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದ ಶಿಕ್ಷಕ ದಂಪತಿ ಬಸವರಾಜ ಕಂದಕೂರ ಮತ್ತು ಸುಜಾತಾ ಕಂದಕೂರ ಅವರ ಪುತ್ರಿಯಾಗಿದ್ದಾರೆ.
ವಿಜಯಪುರಕ್ಕೆ ಶೇ 94.16 ಫಲಿತಾಂಶ: ಜಿಲ್ಲೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ -1 ಬರೆದ ಒಟ್ಟು 38,423 ವಿದ್ಯಾರ್ಥಿಗಳ ಪೈಕಿ 36,180 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆಗೆ ಶೇ 94.16ರಷ್ಟು ಫಲಿತಾಂಶ ಲಭಿಸಿದೆ.
2024-25 ನೇ ಸಾಲಿನಲ್ಲಿ ಶೇ 78.85ರಷ್ಟು ಫಲಿತಾಂಶ ಲಭಿಸಿತ್ತು ಹೋದ ವರ್ಷಕ್ಕಿಂತ ಈ ಬಾರಿ ಫಲಿತಾಂಶದಲ್ಲಿ ಸುಧಾರಣೆ ಆಗಿದೆ.





