ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ: ನಗರದ ಡೊದ್ದ ಮಾರುಕಟ್ಟೆ ಹತ್ತಿರ ಅಪ್ಪು ಸೇವಾ ಸಮಿತಿವತಿಯಿಂದ ಡಾ. ಪುನೀತ್ ರಾಜ್‍ಕುಮಾರ್ ಅವರ 51ನೇ ಹುಟ್ಡು ಹಬ್ಬವನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ. ಸೋಮಶೇಖರ್ ರೆಡ್ಡಿ ಅವರು ಮಾತನಾಡಿ, ಅಪ್ಪು ಅವರು ಕಾಣದ ಹಾಗೇ ಹಲವಾರು ಸಮಾಜ ಸೇವೆ ಮಾಡಿದ್ದಾರೆ. ಅಪ್ಪು ಅವರು ಯವಕರಿಗೆ ಸ್ಪೂರ್ತಿಯಾಗಿದ್ದರು. ಅವರ ಸರಳತೆಯಿಂದ ಜನರ ಮನಸು ಗೆದ್ದ ರಾಜಕುಮಾರ್ ರಾಗಿದ್ದರು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಗುಡಿಗಂಟಿ ಹನುಮಂತ, ಅಪ್ಪು ಸೇವಾ ಸಮಿತಿಯ ಅಧ್ಯಕ್ಷ ಜೆ.ಪಿ ಮಂಜು, ಚಂದ್ರಶೇಖರ್ ಸೇರಿದಂತೆ ಅಪ್ಪು ಸೇವಾ ಸಮಿತಿ ಸದಸ್ಯರು ಹಾಜರಿದ್ದರು.





