ಬೆಳಗಾಯಿತು ವಾರ್ತೆ
ಬಳ್ಳಾರಿ: ಕೆ.ಎಮ್. ಆರ್.ಸಿ ಹಣದಿಂದ ಹರಗಿನಡೋಣಿ ಗ್ರಾಮಕ್ಕೆ ಕುಡಿಯುವ ನೀರಿನ ಕೆರೆ ನಿರ್ಮಿಸುವಂತೆ ಮತ್ತು ಇನ್ನಿತರ ಸೌಲಭ್ಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಗಣಿಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿದರು.
ಹೋರಾಟದಲ್ಲಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕಿ ಡಿ. ನಾಗಲಕ್ಷ್ಮೀ ಅವರು ಮಾತನಾಡಿ, ಕಳೆದ 20 ವರ್ಷದ ಹಿಂದೆ ಸುಮಾರು 6-7 ವರ್ಷಗಳು ಅಸಾಮಾನ್ಯ ಬೃಹತ್ ಅಕ್ರಮ ಗಣಿಗಾರಿಕೆಯಿಂದ ಬಳ್ಳಾರಿ ಜಿಲ್ಲೆ ಸೇರಿದಂತೆ ವಿಜಯನಗರ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಸುಮಾರು 11 ತಾಲೂಕಿನ ಜನರ ಬದುಕು ಮೂರಾಬಟ್ಟೆ ಆಗಿದೆ. ಪರಿಸರ ಸಂಪೂರ್ಣ ವಿನಾಶವಾಗಿದೆ. ಅಕ್ರಮ ಗಣಿಗಾರಿಕೆಯಿಂದ ಗಣಿಭಾದಿತ ಪ್ರದೇಶದಲ್ಲಿ ವಿದ್ವಂಸಗೊಂಡಿದ್ದ ಜನರ ಬದುಕು ಮತ್ತು ಪರಿಸರ ಪುನಶ್ಚತನಗೊಳಿಸಲು ರಾಜ್ಯ ಅಥವಾ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿಲ್ಲ. ಆಗ ಅಕ್ರಮ ಗಣಿಗಾರಿಕೆಯ ಬಗ್ಗೆ ಕೂಲಂಕುಶ ಸಂಶೋಧನೆ ನಡೆಸಿ ಕರ್ನಾಟಕ ಲೋಕಾಯುಕ್ತ ಸಿದ್ಧಪಡಿಸಿದ್ದ ತನಿಖಾ ವರದಿಯೊಂದಿಗೆ ಸಮಾಜ ಪರಿವರ್ತನಾ ಸಮುದಾಯದ ಗೌರವಾನ್ವಿತ ಶ್ರೀ ಎಸ್ ಆರ್ ಹಿರೇಮಠ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದರು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಆರ್ ಶವರಾಮ್ ರೆಡ್ಡಿ, ಡಿ. ಈರಣ್ಣ, ಬುಗ್ಗೆಶ್, ಹೆಚ್ ರಾಜನಗೌಡ್ರು, ಬಿ. ಬಸವನಗೌಡ, ಬಿ.ಹೆಚ್ ನಿಂಗಮ್ಮ, ಕೆ. ಎಮ್ ವೀರಭದ್ರಯ್ಯ ಸ್ವಾಮಿ, ರಮೇಶ್ ಗೌಡ, ಹೆಚ್ ಶಿವರಾಮ್ ಗೌಡ, ಹನುಮಂತಪ್ಪ, ಗಂಗಾಧರ್, ಕೆ. ಜಂಬಯ್ಯ, ಲಕ್ಷ್ಮೀ ದೇವಿ, ಎರ್ರಮ್ಮ, ಎಂ. ಗೀತಾ, ಬಿ.ಎಮ್ ಉಮಾದೇವಿ ಸೇರಿದಂತೆ ಇತರರು ಹಾಜರಿದ್ದರು.
ಹರಗಿನಡೋಣಿ ಗ್ರಾಮಕ್ಕೆ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ





