ಬಳ್ಳಾರಿ: ಭಾರತದ ಬೃಹತ್ ಸಂಘಟನೆಯಾದ ಹ್ಯಾಂಡ್‌ಲೂಮ್ ಹ್ಯಾಂಡಿಕ್ರಾಫ್ಟ್ ಫನ್‌ಪೇರ್ ಎಕ್ಸಿಬಿಷನ್ ಬಳ್ಳಾರಿಯ ತಾಳೂರು ರಸ್ತೆಯ ಸ್ನೇಹಾ ಕಾಲೋನಿ ಪಕ್ಕದಲ್ಲಿರುವ ಮೈದಾನದಲ್ಲಿ ಆ. 12ರಂದು ಪ್ರಾರಂಭಿಸಲಿದ್ದು, ಉದ್ಘಾಟನೆಗೆ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಆಗಮಿಸಲಿದ್ದಾರೆ ಎಂದು ರೀಯಾಜ್ ಅಹಮ್ಮದ್ ಅವರು ಹೇಳಿದರು.
ನಗರದ ತಾಳೂರು ರಸ್ತೆಯ ಸ್ನೇಹ ಕಾಲೋನಿ ಹತ್ತಿರದ ಎಕ್ಸಿಬಿಷನ್ ನಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಎಕ್ಸಿಬಿಷನ್ ಪರಿಸರ ಮಾಲಿನ್ಯ ನಿಯಂತ್ರಿಸಿ ನಗರದ ಹೊರವಲಯದಲ್ಲಿ ಹಚ್ಚು ಹೆಸರಿನ ವಾತಾವರಣ ನಿರ್ಮಿಸಿ, ಇದರಲ್ಲಿ ಕರ್ನಾಟದಲ್ಲೇ ಪ್ರಪ್ರಥಮ ಬಾರಿಗೆ ಫಿಶ್ ಟನಲ್, ಅಂಡರ್‌ವಾಟರ್ ಆಕ್ಟೇರಿಯಮ್ (ಬಳ್ಳಾರಿ ಅಂಡರ್ ವಾಟರ್ ಟನಲ್ ಎಕ್ಸ್‌ಪೋ) ನೋಡಬಹುದಾಗಿದೆ. ಅರಮನೆ ಮೈದಾನದಂತೆ ದೊಡ್ಡ ಪ್ರಮಾಣದ ಫಿಶ್ ಲ್ಯಾಂಡ್ ಗೇಟ್, ಅಂಗಡಿ ಮಳಿಗೆ ಶಾಪಿಂಗ್ ಗ್ಯಾಲರಿಗಳೊಂದಿಗೆ ಆನೇಕ ರಾಜ್ಯಗಳ ಕಲೆ, ಸಂಸ್ಕೃತಿಗಳನ್ನು ಒಳಗೊಂಡವುಗಳಾದ ಫರ್ ಸಂಸಾರ್ (ಗೃಹೋಪಯೋಗಿ ವಸ್ತುಗಳು), ಆಲಂಕಾರದ ಆಭರಣಗಳು (ಇಮಿಟೇಷನ್ ಜ್ಯುವಲರಿ), ಡ್ರೆಸ್ ಮೆಟೀರಿಯಲ್ಸ್, ತಿರುವೂ, ಈರೋಡ್ (ತಮಿಳುನಾಡು) ಟೆಕ್ಸ್‌ಟೈಲ್ಸ್, ವುಡನ್ ಕ್ರಾಸ್ಟೆಡ್ ಗೂಡ್, ಊಟಿಯ ಒಣಗಿದ ಹಣ್ಣುಗಳು, ಕೀ ಚೈನ್, ಪ್ರಿಂಟಿಂಗ್, ಆನ್‌ರೈಸ್, ಗೃಹೋಪಯೋಗಿ ಸರಕುಗಳು, ಕಿಚನ್‌ವೇರ್, ಮೈಸೂರು ಕಾಂಡಿಮೆಂಟ್ಸ್, ಹೋಮ್ ಮೇಜ್, ಫುಟ್‌ವೇರ್, ಎಕ್ಸ್‌ಕ್ಯೂಸಿವ್ ಬಾಂಬೆ ಚಾಟ್, ಸಿಮ್ಲಾ ಬಜ್ಜಿ, ಪಾಪಡ್ ಮೇಡ್, ಮೌತ್ ವಾಟರಿಂಗ್ ರೆಸ್ಟೋರೆಂಟ್ ಹಾಗೂ ಇತರ ತಿಂಡಿಗಳಾದ ಐಸ್‌ಕ್ರೀಮ್, ಪಾಪ್‌ಕಾರ್ನ್, ಕಬ್ಬಿನಹಾಲು ಇವುಗಳೊಂದಿಗೆ ದೊಡ್ಡದಾದ ಅಮ್ಯೂಸ್ ಮೆಂಟ್ ಪಾರ್ಕ್, ಮೊದಲ ಬಾರಿಗೆ ಬಳ್ಳಾರಿಯಲ್ಲಿ ಮನರಂಜಿಸಲಿದ್ದು, ತಮ್ಮ ಕುಟುಂಬದೊಂದಿಗೆ ಜೈಂಟ್ ವೀಲ್, ಪ್ರಿಸ್ಟಿ, ಬೌನ್ಸಿಂಗ್, ಮಕ್ಕಳಗಾಗಿ ಬಂಪರ್ ಬೋಟ್, ಸುನಾಮಿ, ಸ್ಟೀಮ್ ಟವರ್, ಆರ್ಟಿಫಿಸಿಯಲ್ ಕೊಳದಲ್ಲಿ ಬೋಟ್ ರೈಡಿಂಗ್ ನಡೆಸುವುದು, ಇದೇ ಸಂಕೀರ್ಣದಲ್ಲಿ ಇತರ ಬ್ರೇಕ್ ಡ್ಯಾನ್ಸ್, ಕಪ್ ಅಂಡ್ ಸಾಸರ್, ಕೊಲಂಬಸ್, ಟೈಟಾನಿಕ್, ಡ್ರಾಗನ್ ಟ್ರೆನ್, ಮಕ್ಕಳಿಗಾಗಿ ಇತರೆ ಮೋನೋ ಟ್ರೇನ್, ಹನಿ ಬೀ, ಸನ್ ಮೂನ್, ಮೇರಿ ಗೌಂಡ್, ತ್ರಿಡಿ ಷೋ ಸೇರಿದಂತೆ ಇತರೆ ಮನೋರಂಜನೆಗಳಿರುತ್ತವೆ ಎಂದರು.
ಏಷ್ಯಾದಲ್ಲೇ ಅತ್ಯಂತ ಹಿರಿಯ ಮೊಬೈಲ್ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣದಲ್ಲಿ ನಾವು ಒಬ್ಬರಾಗಿದ್ದೇವೆ. ಇದನ್ನೇ ಬಳ್ಳಾರಿ ನಾಗರೀಕರು ಆಮಂತ್ರಣವೆಂದು ಪರಿಗಣಿಸಿ ಪಾಲ್ಗೊಂಡು ಮನೋರಂಜನೆ ಹೊಂದಲು ತಮ್ಮ ಕುಟುಂಬದೊಂದಿಗೆ ಆಗಮಿಸಲು ಕೋರಲಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಜಯ್ ಪಾಲ್ ಸನ್, ಮಹಮ್ಮದ್ ಜಾಕೀರ್ ಹಾಜರಿದ್ದರು.


