22.1 C
Bellary
Friday, February 23, 2024

Localpin

spot_img

ರಾಜ್ಯಪಾಲರ ಹಿಂದಿ ಭಾಷಣಕ್ಕೆ ವಿರೋಧ

ಬೆಳಗಾಯಿತು ವಾರ್ತೆ | www.belagayithu.in

ಬೆಂಗಳೂರು, ಫೆಬ್ರವರಿ 12: ಕನ್ನಡ ಉಳಿಸುವುದಕ್ಕೆ ಬಹಳ ಪ್ರಮುಖವಾದಂತಹ ರಾಜ್ಯದ ಶಾಸನ ಸಭೆಯ ಜಂಟಿ ಅಧಿವೇಶನದಲ್ಲಿ ಕನ್ನಡ ಮಾಯವಾಗಿದೆ. ಹಿಂದಿಯಲ್ಲಿ ಮಾತನಾಡಿರುವುದು ಖಂಡನೆ. ಶಾಸಕರಿಗೆ, ಮಂತ್ರಿಗಳಿಗೆ ಕನ್ನಡ ಬೇಡ್ವಾ ಎಂದು ಹೋರಾಟಗಾರ ವಾಟಾಳ್ ನಾಗರಾಜ್  ವಾಗ್ದಾಳಿ ಮಾಡಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವತ್ತು ಕರ್ನಾಟಕ ರಾಜ್ಯದ ವಿಧಾನಮಂಡಲದ ಮೊದಲನೆ ದಿನ. ಇದನ್ನು ಉದ್ದೇಶಿಸಿ ರಾಜ್ಯಪಾಲರು ಹಿಂದೆಯಲ್ಲಿ ಭಾಷಣ ಮಾಡಿದ್ದಾರೆ. ರಾಜ್ಯಪಾಲರ ಬಗ್ಗೆ ನನಗೆ ಗೌರವವಿದೆ. ಆದರೆ ಅವರ ಹಿಂದಿ ಭಾಷಣದ ಬಗ್ಗೆ ವಿರೋಧವಿದೆ. ಶಾಸನ ಸಭೆಯಲ್ಲಿ ಒಬ್ಬ ಶಾಸಕರು, ಎಂಎಲ್​ಸಿ, ಮಂತ್ರಿಗಳು ವಿರೋಧ ಮಾಡಿಲ್ಲ. ರಾಜ್ಯಪಾಲರು ಹಿಂದೆಯಲ್ಲೆ ಕನ್ನಡ ಅಭಿವೃದ್ಧಿ ಮಾಡುತ್ತೇವೆ ಅಂತ ಮಾತಾನಾಡಿದ್ದರು. ನಮ್ಮ ಗೌರವಾನ್ವಿತ ಸದಸ್ಯರನ್ನ ಏನು ಅಂತ ಹೇಳಬೇಕೊ ಗೊತ್ತಿಲ್ಲ. ನಮ್ಮ ಶಾಸಕರು, ಎಂಎಲ್​ಸಿ, ಮಂತ್ರಿಗಳ ಬಗ್ಗೆ ಖಂಡನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

1967ರ ಅಂದಿನ ರಾಜ್ಯಪಾಲರ ಇಂಗ್ಲೀಷ್ ಭಾಷಣಕ್ಕೆ ಒಪ್ಪಿರಲಿಲ್ಲ. ಜೆಹೆಚ್ ಪಟೇಲ್ ಸಿಎಂ ಆಗಿದ್ದಾಗ ಸಂಪೂರ್ಣ ಭಾಷಣ ವಿರೋಧ ಮಾಡಿದ್ದೆ. ಖುರ್ಷಿದ್ ಅಲಾಂಖಾನ್ ರಾಜ್ಯಪಾಲರ ಭಾಷಣ ಮಾಡುದಕ್ಕೆ ಆಗದೆ ಕನ್ನಡದಲ್ಲಿ ಭಾಷಣ ಮಾಡಬೇಕಂತ ಹಟ ಹಿಡಿದಾಗ ಸದನದಿಂದ ಹೊರ ಹೋದರು. ಇದು ಐತಿಹಾಸಿಕವಾದ ದಿನ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles