ಬೆಳಗಾಯಿತು ವಾರ್ತೆ | Www.belagayithu.in
ಕುಡತಿನಿ: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಶಾಸಕರಾದ ಗಾಲಿ ಜನಾರ್ದನರೆಡ್ಡಿ, ಬೈರತಿ ಬಸವರಾಜ ಸೇರಿದಂತೆ ರಾಜ್ಯದ ಬಿಜೆಪಿ ನಾಯಕರು ಕುಡತಿನಿಗೆ ಬಂದರೂ, ಇಲ್ಲಿನ ಗೌತಮ್‌ನಗರದ ನೂರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ಗೆ ಸೇರ್ಪಡೆಗೊಂಡಿರುವುದು ಈ ಉಪ ಚುನಾವಣೆ ಕಾಂಗ್ರೆಸ್ ಗೆಲುವಿಗೆ ನಾಂದಿಯಾಗಲಿದೆ ಎಂದು ಕುಡತಿನಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ವಿ.ರಾಜಶೇಖರ ಹೇಳಿದರು.ಇಲ್ಲಿನ ಕುಡತಿನಿ ಪಟ್ಟಣದ ಗೌತಮ್ ನಗರದ ೧೭ನೇ ವಾರ್ಡಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸೇರ್ಪಡೆ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿ, ಸಂಸದ ಈ.ತುಕಾರಾಂ ಅವರು ಶಾಸಕರಾಗಿದ್ದಾಗ ಕುಡತಿನಿ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯದ ಜತೆಗೆ ಜನತೆಗೆ ಮೂಲಭೂತ ಸೌಕರ್ಯ ಕಲ್ಪಿಸಿದ ಹಿನ್ನಲೆ ಇವರ ಅಭಿವೃದ್ಧಿ ಕಾರ್ಯ ಮೆಚ್ಚಿ ಬಿಜೆಪಿ ಮುಖಂಡ ಕಳ್ಳಳ್ಳಿ ರಾಮು ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಬಿಜೆಪಿಗರು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದು, ಇದರಿಂದ ಗೊತ್ತಾಗುತ್ತದೆ ಬಿಜೆಪಿ ಬಲ ಎಷ್ಟಿದೆ ಎಂಬುವುದು. ಕಳ್ಳಳ್ಳಿ ರಾಮು ಅವರು ಹಿಂದಿನ ಪುರಸಭೆಯ ೧೪ನೇ ವಾರ್ಡ್ಗೆ ಸ್ಪರ್ಧಿಸಿದ್ದರು. ಹಲವು ವರ್ಷಗಳಿಂದ ಶಿಸ್ತಿನ ಸಿಪಾಯಿಯಂತೆ ಶ್ರಮಿಸಿದ ಅವರಿಗೆ ಬಿಜೆಪಿಗೆ ಒಳ್ಳೆಯ ಸ್ಥಾನಮಾನಗಳು ದೊರಕದ ಪರಿಣಾಮ ಇಂದು ಕಾಂಗ್ರೆಸ್ಗೆ ಬಂದಿರುವುದು ಮತ್ತಷ್ಟು ಶಕ್ತಿ ಬಂದಿದೆ. ಕಾಂಗ್ರೆಸ್ಗೆ ಬಂದಂತಹ ಬಿಜೆಪಿಗರಿಗೆ ಒಳ್ಳೆಯ ಸ್ಥಾನಮಾನಗಳು ಲಭಿಸಲಿವೆ. ಗಾಲಿ ಜನಾರ್ದನರೆಡ್ಡಿ ಬಳ್ಳಾರಿಗೆ ಯಾವುದೇ ಕೊಡುಗೆ ನೀಡಿಲ್ಲ. ಗಂಗಾವತಿಯಲ್ಲಿ ಮತದಾರರಿಗೆ ಮಂಕುಬೂದಿ ಹಚ್ಚಿ ಗೆದ್ದಿದ್ದಾರೆ. ಆದರೆ, ಸಂಡೂರು ಕ್ಷೇತ್ರದ ಜನರು ಬುದ್ದಿವಂತರು ಇಂತಹ ಸುಳ್ಳು ಆರೋಪಗಳಿಗೆ ಕಿವಿಗೊಡುವುದಿಲ್ಲ. ಬದಲಾಗಿ ಇಂತರಿಗೆ ಈ ಉಪ ಚುನಾವಣೆಯಲ್ಲಿ ಬುದ್ಧಿ ಕಲಿಸಲು ಸಿದ್ಧರಾಗಿದ್ದಾರೆ. ಬಿಜೆಪಿಯ ಸಿ.ಟಿ.ರವಿ, ಬೈರತಿ ಬಸವರಾಜ ಸೇರಿದಂತೆ ನಾನಾ ನಾಯಕರು ಬಂದು ಹೋದರೂ, ಇಲ್ಲಿನ ಜನ ಬಿಜೆಪಿಗೆ ಮಾನ್ಯತೆ ನೀಡುವುದಿಲ್ಲ. ಯಾರೇ ಬಂದರೂ, ಕಾಂಗ್ರೆಸ್ ಗೆಲುವು ತಿಪ್ಪಿಸಲು ಆಗುವುದಿಲ್ಲ. ಈಗಾಗಲೇ ಸಾಕಷ್ಟು ಜನ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ಗೆ ಬಂದಿದ್ದು, ಇನ್ನಷ್ಟು ಜನರು ಬರಲಿದ್ದಾರೆ. ಏನೇ ತಂತ್ರಗಾರಿಕೆ ಮಾಡಿದರೂ, ಈ ಉಪ ಚುನಾವಣೆಯಲ್ಲಿ ಅವರ ಆಟ ನಡೆಯುವದಿಲ್ಲ ಎಂದು ವಾಗ್ದಾಳಿ ನಡೆಸಿದರು.ಕಳ್ಳಳ್ಳಿ ರಾಮು, ಸಿದ್ದರಾಮ, ಉಮೇಶ, ರಾಮು, ಗುರುಸ್ವಾಮಿ, ರುದ್ರ ಸೇರಿದಂತೆ ನೂರಕ್ಕೂ ಹೆಚ್ಚು ಬಿಜೆಪಿಗರು ಕಾಂಗ್ರೆಸ್ಗೆ ಸೇರ್ಪಡೆಗೊಂಡರು.ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷ ಕನಕೇರಿ ಪಂಪಾಪತಿ, ಸದಸ್ಯ ವೆಂಕಟರಮಣಬಾಬು, ಬುಡ್ಗ ಜಂಗಮ ಸಮಾಜದ ಅಧ್ಯಕ್ಷ ಗಂಗಾಧರ, ಮುಖಂಡರಾದ ಚಂದ್ರಯ್ಯ ದೊಡ್ಡಬಸಪ್ಪ, ಮಹಾಂತೇಶ, ಮಡಿವಾಳ ರಾಜಪ್ಪ, ಸಿದ್ಧಲಿಂಗಸ್ಚಾಮಿ ಇದ್ದರು.