ಬೆಳಗಾಯಿತು ವಾರ್ತೆ
ಮರಿಯಮ್ಮನಹಳ್ಳಿ: ನರೇಂದ್ರ ಮೋದಿಜೀ ರವರು ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿಯಲು ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿ ಕೊಂಡು ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿಗೆ ಎರಡು ಪಕ್ಷಗಳ ಕಾರ್ಯಕರ್ತರು ಶ್ರಮಿಸಲಿದ್ದಾರೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಹೇಳಿದರು.
ಶುಕ್ರವಾರ ಸಮೀಪದ ಗರಗ ನಾಗಲಾಪುರ ಶ್ರೀ ಒಪ್ಪತ್ತೇಶ್ವರ ಸ್ವಾಮಿ ವಿರಕ್ತ ಮಠದ ನಿರಂಜನ ಪ್ರಭುದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುತ್ಸದ್ದಿ ರಾಜಕಾರಣಿ ದೇವೆಗೌಡರವರು ಮತ್ತು ಪ್ರಧಾನಿ ಮೋದಿರವರು ಮಾಡಿಕೊಂಡ ಮೈತ್ರಿಯ ಹಿನ್ನೆಲೆಯಲ್ಲಿ ಹ.ಬೊ.ಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ನೇಮಿರಾಜನಾಯ್ಕ್ ರವರು ನಮ್ಮೊಂದಿಗೆ ಇದ್ದು, ಗೆಲುವಿಗೆ ಶ್ರಮಿಸುವರು ಎಂದರು. ಗೆಲ್ಲುವಂತಹವರನ್ನು ಗುರುತಿಸಿ ಪಕ್ಷ ಟಿಕೇಟ್ ನೀಡಿದೆ.
ಹಾಲಿ ಸಂಸದರನ್ನು ಟಿಕೇಟ್ ನಿರಾಕರಿಸಿಲ್ಲ, ಪಕ್ಷದಲ್ಲಿ ಯಾವುದೇ ಬಂಡಾಯವಿಲ್ಲ, ಈಶ್ವರಪ್ಪ ಮತ್ತು ಯಡಿಯೂರಪ್ಪರವರ ಮುನಿಸನ್ನು ರಾಜ್ಯನಾಯಕರು ಪರಿಹರಿಸುವರು ಎಂದರು.
ಈ ಸಂಧರ್ಭದಲ್ಲಿ ಶಾಸಕ ನೇಮಿರಾಜನಾಯ್ಕ್, ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ, ಜಿಲ್ಲಾ ಉಪಾಧ್ಯಕ್ಷ ಎಸ್.ಕೃಷ್ಣನಾಯ್ಕ್, ಕಾರ್ಯದರ್ಶಿ ವೀರೇಶ್ವರಸ್ವಾಮಿ, ಜೆಡಿಎಸ್ ಮುಖಂಡರಾದ ಓಬಪ್ಪ, ಗರಗಪ್ರಕಾಶ, ಗುಂಡಾಸ್ವಾಮಿ, ಬಿ.ಡಿ.ಗಂಗಾಧರ, ನಂದೀಶ್ ಸೇರಿದಂತೆ ಇತರರಿದ್ದರು.