ಬೆಳಗಾಯಿತು ವಾರ್ತೆ |www.belgayithu.in
ನವದೆಹಲಿ: ಏಪ್ರಿಲ್ 2019 ಮತ್ತು ಜನವರಿ 2024ರ ನಡುವೆ ಚುನಾವಣಾ ಬಾಂಡ್‌ಗಳ ಮೂಲಕ ಪ್ರಾದೇಶಿಕ ಪಕ್ಷಗಳು 5,221 ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆಗಳನ್ನು ಪಡೆದಿವೆ. ಇದೇ ಅವಧಿಯಲ್ಲಿ ಬಿಜೆಪಿಯೊಂದೇ 6,060.51 ಕೋಟಿ ರೂಪಾಯಿ ಸಂಗ್ರಹಿಸಿದೆ.
ಚುನಾವಣಾ ಆಯೋಗವು ಪ್ರಕಟಿಸಿದ ಚುನಾವಣಾ ಬಾಂಡ್‌ಗಳ ಅಂಕಿಅಂಶಗಳ ಪ್ರಕಾರ, ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಎಎಪಿ ಇದೇ ಅವಧಿಯಲ್ಲಿ ಕ್ರಮವಾಗಿ 1,421.86 ಕೋಟಿ ರೂ. ಮತ್ತು 65.45 ಕೋಟಿ ರೂ. ಗಳಿಸಿವೆ.
ಪ್ರಾದೇಶಿಕ ಪಕ್ಷಗಳಲ್ಲಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಾತ್ರ 1,609.53 ಕೋಟಿ ರೂ. ಗಳನ್ನು ಸಂಗ್ರಹಿಸಿದೆ. ಇದು ಚುನಾವಣಾ ಬಾಂಡ್‌ಗಳ ಮೂಲಕ ಇತರೆ 22 ಪ್ರಾದೇಶಿಕ ಪಕ್ಷಗಳು ಸ್ವೀಕರಿಸಿದ ಒಟ್ಟು ದೇಣಿಗೆಯ ಶೇ 30ರಷ್ಟಿದೆಭಾರತ್ ರಾಷ್ಟ್ರ ಸಮಿತಿಯು (ಬಿಆರ್‌ಎಸ್) ಚುನಾವಣಾ ಬಾಂಡ್‌ಗಳ ಮೂಲಕ 1,214.70 ಕೋಟಿ ರೂ., ಬಿಜೆಡಿ 775.50 ಕೋಟಿ ರೂ., ಡಿಎಂಕೆ 639 ಕೋಟಿ ರೂ., ವೈಎಸ್‌ಆರ್‌ಸಿಪಿ 337 ಕೋಟಿ ರೂ., ಟಿಡಿಪಿ 218.88 ಕೋಟಿ ರೂ. ಮತ್ತು ಶಿವಸೇನೆ 159.38 ಕೋಟಿ ರೂ.ಗಳನ್ನು ಚುನಾವಣಾ ಬಾಂಡ್‌ಗಳ ಮೂಲಕ ಸಂಗ್ರಹಿಸಿವೆ.
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಎಸ್‌ಬಿಐನಲ್ಲಿ ವಿವಿಧ ಮುಖಬೆಲೆಯ ಒಟ್ಟು 22,217 ಚುನಾವಣಾ ಬಾಂಡ್‌ಗಳನ್ನು ಏಪ್ರಿಲ್ 1, 2019 ಮತ್ತು ಫೆಬ್ರುವರಿ 15, 2024 ರ ನಡುವೆ ಖರೀದಿಸಲಾಗಿದೆ. ಅವುಗಳಲ್ಲಿ 22,030 ಅನ್ನು ರಾಜಕೀಯ ಪಕ್ಷಗಳು ನಗದಾಗಿ ಪರಿವರ್ತಿಸಿಕೊಂಡಿವೆ.