ಬಳ್ಳಾರಿ: ಬಳ್ಳಾರಿ ಜಿಲ್ಲಾ ಪೊಲೀಸ್, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರಿಂದ ಅಂತರ್ ಜಿಲ್ಲಾ ಮೋಟರ್ ಸೈಕಲ್ ಕಳ್ಳನ ಮಾಡುತ್ತಿದ್ದ ಆರೋಪಿ ಅಸ್ಲಾಂ ನಿಂದ ವಿವಿಧ ಕಂಪನಿಯ ಸುಮಾರು ೧೨ ಮೋಟಾರು ಸೈಕಲ್ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ರಂಜಿತ್ ಕುಮಾರ್ ಭಂಡಾರು ಅವರು ತಿಳಿಸಿದ್ದಾರೆ.
ಆರೋಪಿ ಅಸ್ಲಾಂ ತಂದೆ ಕಲೀಮುಲ್ಲಾ ನನ್ನು ಬಂಧಿಸಿ ದಸ್ತಗಿರಿ ಮಾಡಿದಾಗ ಆರೋಪಿಯಿಂದ ಬಳ್ಳಾರಿ, ರಾಯಚೂರು, ವಿಜಯನಗರ,ಚಿತ್ರದುರ್ಗ, ಧಾರವಾಡ, ಒಟ್ಟು ಐದು ಜಿಲ್ಲೆಯಲ್ಲಿ ಮೋಟಾರು ಸೂಕಲ್ ಕಳ್ಳತನ ಮಾಡಿದ್ದು ಆರೋಪಿತನಿಂದ ವಿವಿಧ ಕಂಪನಿಯ ೬ ಲಕ್ಷ ರೂಪಾಯಿ ಮೌಲ್ಯದ ವಾಹನ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ
ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಮೀರ್ ತಂದೆ ಲಾಲ್ ಸಾಬ್ ನೀಡಿದ ದೂರಿನ ಮೇರೆಗೆ ಸಿರುಗುಪ್ಪ ಉಪ ವಿಭಾಗ ಡಿವೈಎಸ್ ಪಿ ವೆಂಕಟೇಶ್ ಅವರ ನೇತೃತ್ವದಲ್ಲಿ ತಂಡ ರಚಿಸಿ ಸದರಿ ತಂಡದಲ್ಲಿ ಬಳ್ಳಾರಿ ಪಿಐ ಎನ್ ಸತೀಶ್, ಪಿ ಎಸ್ ಐ ಸಂತೋಷ್ ಡಬ್ಬಿನ್, ಪಿಎಸ್ ಐ ತ್ಯಾಗರಾಜನ್, ಗ್ರಾಮೀಣ ಠಾಣೆಯವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಎಸ್ ಐ ನವಾಬ್ ಹೆಚ್ ಸಿ ೪೦೪ ಖಾಜಾ ಮೋಯಿನುದ್ದಿನ್, ಹೆಚ್ ಸಿ೫೬೩ ಶ್ರೀನಿವಾಸ, ಹೆಚ್ ಸಿ ೪೭ಸುಧಾಕರ್, ಹೆಚ್ ಸಿ ೨೬೪ಕೆ.ಬೀರಪ್ಪ, ಹೆಚ್ ಸಿ ೨೯೦ ಶರಣಪ್ಪ, ಪಿ.ಸಿ.೧೨೦೬ ಎ. ರಮೇಶ್ ಬಾಬು, ಪಿ.ಸಿ ೮೧೫ ಮಾರ್ಕ್, ಪಿಸಿ೧೦೭೯ ಮಂಜುನಾಥಅವರು ಆಗಸ್ಟ ೧೦ ರಂದು ಪ್ರಕರಣ ಬೇಧಿಸಿದ್ದಾರೆ. ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಸ ಸಿಬ್ಬಂಧಿಗಳ ಕರ್ತವ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.