ಬಳ್ಳಾರಿ: ನಗರದ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆವತಿಯಿಂದ ತೆರೆದ ಮನೆ ಕಾರ್ಯಕ್ರಮ ಅಂಗವಾಗಿ ಪ್ಯೂಪಿಲ್ ಟ್ರೀ ಸ್ಕೂಲ್ ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣೆ ಹೇಗಿರುತ್ತದೆ ಮತ್ತು ಠಾಣೆಯ ಸಿಬ್ಬಂದಿ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂಬುದರ ಬಗ್ಗೆ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತೆರೆದ ಮನೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪೊಲೀಸ್ ಇನ್ಸ್ಪೆಕ್ಟರ್ ಎಂ.ಎನ್ ಸಿಂಧೂರ ಅವರು ಪೊಲೀಸ್ ಠಾಣೆ ಹೇಗಿರುತ್ತದೆ ಮತ್ತು ಇಲ್ಲಿನ ಸಿಬ್ಬಂದಿ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮಾಹಿತಿ ಹಾಗೂ ಪೊಲೀಸ್ ಉಪಯೋಗಿಸುವ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ನೀಡಿದರು.ಎಮರ್ಜೆನ್ಸಿ ಸಮಯದಲ್ಲಿ ಉಪಯೋಗಕ್ಕೆ ಬರುವ ಇ ಆರ್ ಎಸ್ ಎಸ್ 112, ವೈರ್ ಲೆಸ್ ಪೊಲೀಸ್, 1098 ಬಗ್ಗೆ ಮಾಹಿತಿ ನೀಡಿದರು. ತದನಂತರ ಸಂವಾದ ಕಾರ್ಯಕ್ರಮದಲ್ಲಿ ಪ್ಯೂಪಿಲ್ ಟ್ರೀ ಸ್ಕೂಲ್ ವಿದ್ಯಾರ್ಥಿಗಳು ಪೊಲೀಸರ ವಸ್ತ್ರ, ಶಸ್ತ್ರಾಸ್ತ್ರಗಳ, ಟ್ರಾಫಿಕ್ ಪೊಲೀಸ್ ಬಗ್ಗೆ ಪ್ರಶ್ನೆಗಳನ್ನು ಕೇಳಿದರು.
ಈ ಸಂದರ್ಭದಲ್ಲಿ ಪಿಎಸ್ ಐ ಸುರೇಶಪ್ಪ, ಪಿಎಸ್ ಐ ಸವಿತಾ ರಾಣಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು