ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: ನಾವು ಮಾತೃ ಪಕ್ಷ ಬಿಜೆಪಿಗೆ ಮರಳಿದ್ದು, ನನಗೆ ಖುಷಿಯಾಗಿದೆ. ಪ್ರಧಾನಿ ಮೋದಿ , ಅಮಿತ್ ಶಾ, ಬಿಎಲ್ ಸಂತೋಷ್, ಯಡಿಯೂರಪ್ಪ, ವಿಜಯೇಂದ್ರ ಅವರಿಗೆ ತುಂಬು ಹೃದಯದ ಧನ್ಯವಾದಗಳು. ಮೂವತ್ತು ವರ್ಷದ ಹಿಂದೆ ಶ್ರೀರಾಮುಲು ನಗರ ಸಭೆ ಸದಸ್ಯ ಆಗುವೆ ಅಂತಾ ಜನಾರ್ದನ ರೆಡ್ಡಿಯವರ ಬಳಿ ಕೇಳಿದ್ದರು. ಆದರೆ ನೀನು ಎಂ ಎಲ್ ಎ ಆಗುವಂತವನು ನಗರಸಭೆ ಏಕೆ ಅಂದಿದ್ದರು. ಆದರೆ ಶ್ರೀರಾಮುಲು ಇಲ್ಲ ಮೊದಲು ನಗರ ಸಭೆ ಸದಸ್ಯನಾಗುವೆ ಎಂದಿದ್ದರು ಎಂದು ಬಳ್ಳಾರಿಯ ಬಿಜೆಪಿ ಸಮಾವೇಶದಲ್ಲಿ ಅರುಣಾ ಲಕ್ಷ್ಮಿ ತಿಳಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ದೇಶಕ್ಕೆ ಮೋದಿ, ಬಳ್ಳಾರಿಗೆ ಶ್ರೀರಾಮುಲು ಅಂತ ಮತ ಹಾಕಬೇಕು. ಮೊನ್ನೆ ಚುನಾವಣೆಯಲ್ಲಿ ಆದ ಘಟನೆಗಳನ್ನ ನೆನಪು ಮಾಡಿಕೊಳ್ಳೋದು ಬೇಡ, ಇದು ಶತೃಗಳಿಗೆ ಅನುಕೂಲ ಆಗುತ್ತದೆ. ಈ ಬಾರಿ ಶ್ರೀರಾಮುಲುರನ್ನ ಗೆಲ್ಲಿಸಿ ಮೋದಿ ಕೈ ಬಲಪಡಿಸೋಣ, ಜನಾರ್ದನ ರೆಡ್ಡಿ ಬಳ್ಳಾರಿ ಉಸ್ತುವಾರಿ ಸಚಿವರಿದ್ದಾಗ ಅಂದಿನ ಸಿಎಂ ಯಡಿಯೂರಪ್ಪ ನವರು ಸಾವಿರ ಕೋಟಿ ಅನುದಾನ ತಂದಿದ್ದರು ಎಂದು ಜನಾರ್ದನ ರೆಡ್ಡಿ ಸಚಿವರಾಗಿದ್ದಾಗ ಮಾಡಿದ ಅಭಿವೃದ್ಧಿ ಪಟ್ಟಿಯನ್ನು ಅರುಣಾ ಲಕ್ಷ್ಮಿ ಓದಿದರು.