ಬೆಳಗಾಯಿತು ವಾರ್ತೆ |Www.belagayithu.in
ಬಳ್ಳಾರಿ : ಮಾಜಿ ಸಚಿವ ಬಿ ಶ್ರೀರಾಮುಲು ಅವರ ನಿವಾಸಕ್ಕೆ ಜಲ ಶಕ್ತಿ ಮತ್ತು ರೇಲ್ವೆ ಖಾತೆಯ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರು ಇಂದು ಭೇಟಿ ನೀಡಿದರು.ಬಳ್ಳಾರಿಯಲ್ಲಿ ರೈಲ್ವೆ ಕಾಮಗಾರಿಗಳ ಬಗ್ಗೆ ಸಭೆ ಆಯೋಜಿಸಿದ್ದು ಇದರ ಸಂಬಂಧಪಟ್ಟಂತೆ ಕೆಲ ಸಮಯ ನನ್ನ ನಿವಾಸದಲ್ಲಿ ಚರ್ಚೆ ನಡೆಸಲಾಯಿತು ಎಂದು ಶ್ರೀ ರಾಮುಲು ಅವರು ಹೇಳಿದರು.
.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ನಾಯ್ಡು, ಮಾಜಿ ಶಾಸಕರಾದ ಸೋಮಶೇಖರ್ ರೆಡ್ಡಿ, ಶಾಸಕರಾದ ನೇಮಿರಾಜ ನಾಯಕ್ ,ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮೀನಹಳ್ಳಿ ತಾಯಣ್ಣ ,ನಗರಸಭೆ ಸದಸ್ಯರು, ಪಾಲಿಕೆ ಸದಸ್ಯರು ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.





