ಬೆಳಗಾಯಿತು ವಾರ್ತೆ |www.bealagayithu.in
ಸಂಡೂರು: ರಾಜ್ಯದ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣವಾಗಿದ್ದು, ಕರ್ನಾಟಕ, ಆಂದ್ರ ಮತ್ತು ತೆಲಂಗಾಣದ ನಕಲಿ ಬ್ಯಾಂಕ್‌ಗಳ ಮೂಲಕ ಹಣ ವರ್ಗಾವಣೆ ಮಾಡಿ ರಾಜ್ಯದ ಜನರಿಗೆ ಮೋಸ ಮಾಡಲಾಗಿದ್ದು, ಈ ಬಗ್ಗೆ ಕುಲಂಕುಷವಾಗಿ ತನಿಖೆಯಾಗಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೆಯೇಂದ್ರ ಅವರು ಆಗ್ರಹಿಸಿದರು.
ಸಂಡೂರಿನ ತಾರಾನಗರದಲ್ಲಿ ಶನಿವಾರ ನಡೆದ ವಿಶೇಷ ಕಾರ್ಯಕಾರಣಿ ಸಭೆ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು.
ರಾಜ್ಯ ಸರ್ಕಾರದ ಸಚಿವರು ಲೂಟಿ ಹೊಡೆದ ಹಣವನ್ನು ಲೋಕಸಭಾ ಚುನಾವಣೆಗೆ ಮತ್ತು ಮಧ್ಯ ಖರೀದಿಗೆ ಬಳಕೆ ಮಾಡಲಾಗಿದೆ ಎಂದು ಮಾಹಿತಿ ಇದೆ. ಆದರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಗರಣದ ಬಗ್ಗೆ ನನಗೆ ಮಾಹಿತಿ ಇರಲಿಲ್ಲ ಈಗ ಗೊತ್ತಾಗಿದೆ ಅದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಉಪಚುನಾವಣೆ ಯಾವ ಸಂದರ್ಭದಲ್ಲಿಯೂ ಘೋಷಣೆ ಆಗಬಹುದು ಆದರೆ ಅದಕ್ಕೆ ನಮ್ಮ ಪಕ್ಷ ಸಿದ್ದತೆಯನ್ನು ಮಾಡಿಕೊಂಡಿದ್ದೆವೆ. ಸಂಡೂರು ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಅದನ್ನ ಛೀದ್ರಗೊಳಿಸಿ ಸಂಡೂರಿನಲ್ಲಿ ಕಮಲವನ್ನು ಅರಳಿಸುತ್ತೆವೆ ಎಂದು ಸವಾಲೇಸೆದರು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಅನಿಲ್ ಮೋಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ಸೋಮಶೇಖರ ಗೌಡ, ಎಂಎಲ್‌ಸಿ ರವಿಕುಮಾರ್, ಸಂಸದ ಗೋವಿಂದ ಕಾರಜೋಳ, ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷರು ಬಂಗಾರು ಹನುಮಂತ, ಬಳ್ಳಾರಿ ನಗರದ ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಮಾಜಿ ಸಂಸದ ವೈ. ದೇವೆಂದ್ರಪ್ಪ ಬಿಜೆಪಿ ಹಿರಿಯ ಮುಖಂಡ ರಾಮಲಿಂಗಪ್ಪ, ರಾಜ್ಯ ಎಸ್‌ಟಿ ಮೋರ್ಚಾ ಉಪಾಧ್ಯಕ್ಷರಾದ ಓಬಳೇಶ್, ಗುರುಲಿಂಗನಗೌಡ, ಗಣಿಪಾಲ್ ಐನಾಥ್ ರೆಡ್ಡಿ, ಎಂಎಸ್ ಸಿದ್ದಪ್ಪ, ರಾಮಕೃಷ್ಣ, ದಿವಾಕರ ಸೇರಿದಂತೆ ಇತರರಿದ್ದರು.





