ಬೆಳಗಾಯಿತು ವಾರ್ತೆ |www.bealagayithu.in
ಬಳ್ಳಾರಿ: ಮುಸ್ಲಿಮರ ಪವಿತ್ರ ಆಚರಣೆ ಮೊಹರಂ ಹಬ್ಬದ ವೇಳೆ ದುರಂತವೊಂದು ಸಂಭವಿಸಿದ್ದು, ಆಚರಣೆ ವೀಕ್ಷಿಸುತ್ತಿದ್ದ ಹಲವು ಮಂದಿ ಶೆಡ್ ರೂಫ್ ಕುಸಿದು ಗಾಯಗೊಂಡಿದ್ದಾರೆ.
ಬಳ್ಳಾರಿ ಹೊರವಲಯದ ಹಳೇ ಬೈಪಾಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮೊಹರಂ ಆಚರಣೆ ವೀಕ್ಷಿಸಲು ಅಂಗಡಿಗೆ ಹಾಕಿದ್ದ ತಗಡಿನ ಶೆಡ್ ಮೇಲೆ ಹತ್ತಾರು ಮಂದಿ ನಿಂತು ವೀಕ್ಷಿಸುತ್ತಿದ್ದರು.
ಈ ವೇಳೆ ಜನ ಹೆಚ್ಚಾದಂತೆ ತಗಡಿನ ಶೆಡ್ ಭಾರ ತಡೆಯಲಾರದೇ ನೋಡನೋಡುತ್ತಲೇ ಕುಸಿದಿದೆ, ಅಷ್ಟೇ ಅಲ್ಲದೇ, ಕುಸಿದು ಕೆಳಕ್ಕೆ ಬೀಳೋ ವೇಳೆ ಜನರ ಮೇಲೆ ಬಿದ್ದಿದೆ. ಈ ವೇಳೆ ನೂರಾರು ಮಂದಿ ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ. ಮೇಲಿನಿಂದ ಹತ್ತಾರು ಮಂದಿ ಒಬ್ಬರ ಮೇಲೆ ಒಬ್ಬರು ಬಿದ್ದಿದ್ದು, ರೂಫ್ ಕೆಳಗಡೆಯೂ ಜನದಟ್ಟಣೆ ಇತ್ತು. ಅವರ ಮೇಲೆ ಶೆಡ್ ಸಮೇತ ಜನ ಬಿದ್ದಿದ್ದಾರೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ.





