ಕುರುಗೋಡು: ಸಮೀಪದ ಕೊರ್ಲಗುಂದಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ವಿ.ರಾಘವ ರೆಡ್ಡಿ , ಉಪಾಧ್ಯಕ್ಷರಾಗಿ ಮರಿಯಮ್ಮ ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಘವ ರೆಡ್ಡಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮರಿಯಮ್ಮ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಯೋಗೇಶ್ವರ್ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ದೊಡ್ಡ ಕೇಶವರೆಡ್ಡಿ, ಬಳ್ಳಾರಿ ಗಂಗಾರೆಡ್ಡಿ,ಭೀಮರೆಡ್ಡಿ, ರಾಮರೆಡ್ಡಿ, ಬಸವ ನಾಯಕ, ಎಸ್. ಬೆಸೆಜ್ ರೆಡ್ಡಿ, ಹೊಳಗುಂದಿ ಸಿದ್ದಪ್ಪ, ಮರಿ ಅಂಜಿನಪ್ಪ, ಈರಪ್ಪ ಯಾದವ್, ಭೋಮ್ಮಾಯಿ ಮಾರೆಪ್ಪ, ಸಣ್ಣ ಮಾರೆಪ್ಪ, ವೈ.ಈರಪ್ಪ, ಬಲಕುಂದಿ ಸಿದ್ದಪ್ಪ, ಟಿ.ಬಸವರಾಜ, ಬಾಗಿಲ ಸುಂಕಣ್ಣ, ಭೈಲೂರು ವೆಂಕಟೇಶ್, ಬಸರಕೊಡು ಹೊನ್ನೂರಪ್ಪ , ಬೈಲೂರು ವೆಂಕಟೇಶ್, ರಾಮಚಂದ್ರ, ಓ. ತಿಮ್ಮರೆಡ್ಡಿ, ಧಾನಪ್ಪ, ಪ್ರಕಾಶ್ ರೆಡ್ಡಿ, ಪಿಡಿಒ ಪ್ರಕಾಶ್ ಅಮರ ಶೆಟ್ಟಿ, ಗ್ರಾ.ಪಂ ಸದಸ್ಯರು ಮುಖಂಡರು ಗ್ರಾಮಸ್ಥರು ಇದ್ದರು.