ಬಳ್ಳಾರಿ: ಮಾಜಿ ಸಚಿವ ಶ್ರೀರಾಮುಲು ಅವರ ಸಹೋದರಿ, ಬಳ್ಳಾರಿಯ ಬಿಜೆಪಿ ಮಾಜಿ ಸಂಸದೆ ಜೆ.ಶಾಂತಾ ಅವರು ಆಂದ್ರ ಪ್ರದೇಶದ ಸಿಎಂ ಜಗನ್ ನೇತೃತ್ವದಲ್ಲು ವೈಎಸ್ ಆರ್ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.
ಶಾಂತಾ ಅವರದ್ದು ತವರು ಮನೆ ಬಳ್ಳಾರಿಯಾದರೂ, ಗಂಡನ ಮನೆ ಆಂಧ್ರಪ್ರದೇಶದ ಗುಂಟಕಲ್ ನಗರ. 2009 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿಯಿಂದ ಸ್ಪರ್ಧೆ ಮಾಡಿ ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿಆಂಧ್ರದ ಹಿಂದೂಪುರ ಕ್ಷೇತ್ರದಿಂದ ವೈಎಸ್ಆರ್ ಪಕ್ಷದಿಂದ ಸ್ಪರ್ಧೆ ಮಾಡೋ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.