ಬೆಳಗಾಯಿತು ವಾರ್ತೆ
ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾದ ನಟ ದರ್ಶನ ಅವರು ಗುರುವಾರ ಬೆಳಗ್ಗೆ ೯.೩೦ರ ಸಮಯಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲ್ ಸೇರಿದ್ದಾರೆ.
ಪೊಲೀಸ್ ಭದ್ರತೆ ಹಿನ್ನೆಲೆಯಲ್ಲಿ ಜೈಲ್ ಸುತ್ತ ಬಿಗಿ ಭದ್ರತೆಯ ವ್ಯವಸ್ಥೆ ಮಾಡಲಾಗಿದ್ದು, ಸ್ಥಳಕ್ಕೆ ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ, ಎಸ್ಪಿ ಡಾ. ಶೋಭಾರಾಣಿ ಭೇಟಿ ಪರಿಶೀಲನೆ ನಡೆಸಿದರು.
ನಂತರ ನಟ ದರ್ಶನ್ ಅವರಿಗೆ ವೈದ್ಯಕೀಯ ತಪಾಸಣೆ ಮಾಡಿ ರಿಜಿಸ್ಟರ್ ನಲ್ಲಿ ಸಹಿ ಮಾಡಿಸಿ ಬಂದಿಖಾನೆಗೆ ಕಳಿಸಲಾಯಿತು.
ಇತ್ತ ಜೈಲ್ ಹೊರಗಡೆ ನಟ ದರ್ಶನ ಬರುವ ಸುದ್ದಿ ಕೇಳಿದ ಅಭಿಮಾನಿಗಳು ಜೈಲ್ ಮುಂದೆ ಜಮಾಯಿಸಿ ಡಿ ಬಾಸ್ ಡಿ ಬಾಸ್ ಎಂದು ಕೂಗಲಾರಂಭಿಸಿದರು.
ಅಭಿಮಾನಿಗಳು ಹೆಚ್ಚಾದಂತೆ ಎಚ್ಚೆತ್ತ ಪೊಲೀಸ್ ಅಧಿಕಾರಿಗಳು ಅಭಿಮಾನಿಗಳನ್ನು ಚದುರಿಸಲು ಹರ ಸಹಾಸ ಪಡಬೇಕಾಯಿತು.
ನಿರಾಸೆಗೊಂಡ ಅಭಿಮಾನಿಗಳು
ಬಳ್ಳಾರಿ ಜೈಲ್ ಗೆ ನಟ ದರ್ಶನ ಬರುವ ಸುದ್ದಿ ಕೇಳಿದ ಅಭಿಮಾನಿಗಳು ದರ್ಶನ ಅವರನ್ನು ನೋಡಲು ಜೈಲ್ ಬಳಿ ಜಮಾಯಿಸಿದ್ದರು. ಆದರೆ ವಾಹನದಲ್ಲಿ ಕರ್ಟನ್ ಅಳವಡಿಸುವುದರಿಂದ ದರ್ಶನ ಅವರನದನು ನೋಡಲು ಆಗದೆ ನಿರಾಸೆಗೊಂಡರು.





