ಬಳ್ಳಾರಿ: ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಬಳ್ಳಾರಿ ಜಿಲ್ಲೆಯಲ್ಲಿ ಇನಾಂ ರದ್ಧತಿ ಅಭಿಯಾನ ಆರಂಭಿಸಲಾಗಿದೆ ಎಂದು ಸಹಾಯಕ ಆಯುಕ್ತರಾದ ಹೇಮಂತ್ ಕುಮಾರ್ ಅವರು ತಿಳಿಸಿದ್ದಾರೆ.
ನಗರದ ನೂತನ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯ ಐದು ತಾಲೂಕಿನಲ್ಲಿ ಇನಾಂ ರದ್ಧತಿ ಅಭಿಯಾನ ಹಮ್ಮಿಕೊಂಡಿದ್ದೇವೆ. ಈಗಾಗಲೇ ಐದು ಜಿಲ್ಲೆಗಳಿಂದ ಸುಮಾರು 13ಸಾವಿರಕ್ಕೂ ಅಧಿಕ ಅರ್ಜಿ ಸ್ವೀಕೃತವಾಗಿವೆ. 13 ಸಾವಿರ ಅರ್ಜಿಗಳ ಪೈಕಿ ಮೂರು ಸಾವಿರ ಅರ್ಜಿ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ, ಜಿಲ್ಲಾಡಳಿತ ಕೆಲಸ ಮಾಡ್ತೀದೆ.ಕಂದಾಯ ಸಚಿವರು ಪ್ರತಿವಾರ ಇನಾಂ ಭೂಮಿ ರದ್ಧತಿ ಕುರಿತು ಮಾರ್ಗದರ್ಶನ ಮಾಡ್ತಾರೆ..!ಸೆಪ್ಟೆಂಬರ್ ತಿಂಗಳೊಳಗೆ ಇಲಾಂ ರದ್ಧತಿ ಕಾರ್ಯ ಮುಗಿಯಲಿದೆ.ಬಳ್ಳಾರಿಯಲ್ಲಿ ದಿನವೊಂದಕ್ಕೆ 300 ಅರ್ಜಿ ವಿಲೇವಾರಿ ಮಾಡ್ತೀದ್ದೇವೆ.ರೈತರಿಂದ ಮಿನಿಮಮ್ ಪ್ರೀಮಿಯಂ ಫೀ ಮಾತ್ರ ಕಟ್ಟಿಸಿಕೊಳ್ತೇವೆ, ಇದರಿಂದ ರೈತರಿಗೆ ತುಂಬಾ ಅನುಕೂಲವಾಗಿದೆ.ಡಯಗ್ಲಾಟಿಕ್ ಕಾಫಿ ಮೂಲಕ ನಮಗೆ ಇನಾಂ ಭೂಮಿಯ ಆಧಾರ ಕಂಡುಕೊಳ್ಳುತ್ತೇವೆ ಎಂದರು.