ಐಎಫ್‌ಎಸ್‌ ಪರೀಕ್ಷೆ: ಬಸವರಾಜ ದೇಶಕ್ಕೆ ಪ್ರಥಮ

ಬೆಳಗಾಯಿತು ವಾರ್ತೆ| www.belagayithu.in
ಅಥಣಿ (ಬೆಳಗಾವಿ ಜಿಲ್ಲೆ): 2025ನೇ ಸಾಲಿನ ಭಾರತೀಯ ಅರಣ್ಯ ಸೇವೆ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಅಥಣಿ ತಾಲ್ಲೂಕಿನ ಸವದಿಯ ಬಸವರಾಜ ಕೆಂಪವಾಡ(25) ದೇಶಕ್ಕೆ ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ.
ಸವದಿಯ ಖಾಸಗಿ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ, ರಾಯಬಾಗ ತಾಲ್ಲೂಕಿನ ಅಳಗವಾಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ರಿಂದ 10ನೇ ತರಗತಿಯವರೆಗೆ ಬಸವರಾಜ ಅಭ್ಯಸಿಸಿದರು.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಯಲ್ಲಟ್ಟಿಯಲ್ಲಿ ಪಿಯುಸಿ, ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಬಿ.ಎಸ್ಸಿ(ಅರಣ್ಯ) ಓದಿದರು. ನಂತರ ಬೆಂಗಳೂರಿಗೆ ತೆರಳಿ ಸ್ವಯಂ ಅಧ್ಯಯನ ಕೈಗೊಂಡಿದ್ದರು.
ಬಸವರಾಜ ಅವರದ್ದು ಕೃಷಿ ಕುಟುಂಬ. ಮೂರುವರೆ ಎಕರೆ ಜಮೀನಿದೆ. ಕಿರಿಯ ಮಗನ ಸಾಧನೆ ಇಡೀ ಕುಟುಂಬದಲ್ಲಿ ಸಂತಸ ಮೂಡಿಸಿದೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles