ಗ್ರೀನ್‌ ಮ್ಯಾಟ್‌ ಅಳವಡಿಕೆ:ಸಾರ್ವಜನಿಕರಿಂದ ಮೆಚ್ಚುಗೆ

ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ನಗರದ ಕಂಟೋನ್ಮೆಂಟ್‌ ಪ್ರದೇಶದ ರೈಲ್ವೆ ಗೇಟ್‌ ಬಳಿ ಬೇಸಿಗೆ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆ, ಪ್ರತಿದಿನ ನೂರಾರು ವಾಹನ ಸವಾರರು ಉರಿ ಬಿಸಿಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಮಸ್ಯೆಯನ್ನು ಗಮನಿಸಿದ ಮಾಜಿ ಮಹಾಪೌರರು ಹಾಗೂ ಸದಸ್ಯರಾದ ರಾಜೇಶ್ವರಿ ಸುಬ್ಬರಾಯುಡು ಅವರು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಪಾಲಿಕೆಗೆ ಮನವಿ ಮಾಡಿದರು.
ಅವರ ಮನವಿಗೆ ಸ್ಪಂದಿಸಿದ ನಗರ ಪಾಲಿಕೆ ಅಧಿಕಾರಿಗಳು ತುರ್ತಾಗಿ ಗ್ರೀನ್‌ ಮ್ಯಾಟ್‌ ಅಳವಡಿಕೆ ಕಾರ್ಯವನ್ನು ಕೈಗೊಂಡು, ಸ್ಥಳದಲ್ಲಿ ಹಸಿರು ಪದರವನ್ನು ಅಳವಡಿಸಿದರು. ಇದರಿಂದ ಬಿಸಿಲಿನ ತಾಪಮಾನವನ್ನು ಕಡಿಮೆ ಮಾಡಲಾಗಿದ್ದು, ವಾಹನ ಸವಾರರಿಗೆ ಕೆಲಮಟ್ಟಿಗೆ ತಂಪು ಅನುಭವವಾಗುತ್ತಿದೆ.
ಈ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ತಕ್ಷಣ ಸ್ಪಂದಿಸಿದ ರಾಜೇಶ್ವರಿ ಸುಬ್ಬರಾಯುಡು ಹಾಗೂ ಪಾಲಿಕೆ ಅಧಿಕಾರಿಗಳಿಗೆ ಅಭಿನಂದನೆಗಳು ವ್ಯಕ್ತವಾಗಿವೆ.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಯೋಗಾನಂದ ರೆಡ್ಡಿ, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles