ಅದ್ದೂರಿಯಾಗಿ ಜರುಗಿದ ಅಂಬೇಡ್ಕರ್ ಜಯಂತಿ

ಬೆಳಗಾಯಿತು ವಾರ್ತೆ| www.belagayithu.in
ಮರಿಯಮ್ಮನಹಳ್ಳಿ: ಪಟ್ಟಣದ ದಲಿತ ಸಂಘಟನೆಗಳ ವತಿಯಿಂದ ಬಾಬು ಜಗಜೀವನ್ ರಾಮ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಅಂಗವಾಗಿ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಪಟ್ಟಣ ಪಂಚಾಯಿತಿ ಕಚೇರಿ ಆವರಣದಿಂದ ಪ್ರಾರಂಭವಾದ ಮೆರವಣಿಗೆ ಮುಖ್ಯ ಬೀದಿ, ನಾಣಿಕೇರಿ ವೃತ್ತದ ಮೂಲಕ ಸಾಗಿದ್ದು, ಒಂದು ಮತ್ತು ಹದಿನೈದನೇ ವಾರ್ಡ್‌ವರೆಗೆ ವೈಭವದಿಂದ ಮುಂದುವರಿಯಿತು.
ಮೆರವಣಿಗೆಯಲ್ಲಿ ಪೂರ್ಣಕುಂಭ, ಹಲಗೆವಾದನ, ತಾಷಾ ರಾಂಡೋಲ್ ಸೇರಿದಂತೆ ವಿವಿಧ ಸಾಂಪ್ರದಾಯಿಕ ವಾದ್ಯಗಳೊಂದಿಗೆ ಭಾಗವಹಿಸಿದ ಕಾರ್ಯಕರ್ತರು ಉತ್ಸವಕ್ಕೆ ಇನ್ನಷ್ಟು ಮೆರುಗು ತಂದರು.
ಈ ಸಂದರ್ಭದಲ್ಲಿ ಗಣ್ಯರು, ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇಬ್ಬರು ಮಹನೀಯರ ಸಾಧನೆಗಳನ್ನು ಸ್ಮರಿಸಿದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles