ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ದಿವಂಗತ ಶ್ರೀಮತಿ ಲಕ್ಷ್ಮಮ್ಮ ಹಾಗೂ ದಿವಂಗತ ಶ್ರೀ ಸಂಗನಕಲ್ಲು ಪೊಂಪಣ್ಣ ಅವರ ಜ್ಞಾಪಕಾರ್ಥವಾಗಿ, ಸಂಗನಕಲ್ಲು ಗ್ರಾಮದ ಶ್ರೀ ಶ್ರೀರಾಮ ಸೇವಾ ಸಮಿತಿ (ರಿ) ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.
ಈ ಶಿಬಿರವು ಏಪ್ರಿಲ್ 19, ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ಸಂಗನಕಲ್ಲು ಗ್ರಾಮದ ಜ್ಞಾನಬೋಧಿನಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀ ಶ್ರೀರಾಮ ದೇವಸ್ಥಾನ ಆವರಣದಲ್ಲಿ ನಡೆಯಲಿದೆ.
ಶಿಬಿರದಲ್ಲಿ ವಿವಿಧ ತಜ್ಞ ವೈದ್ಯರು ಭಾಗವಹಿಸಲಿದ್ದು, ಹೃದಯರೋಗ ಹಾಗೂ ಸಕ್ಕರೆ ಕಾಯಿಲೆ ತಜ್ಞರಾದ ಡಾ. ಪೃಥ್ವಿರಾಜ್ ಸಂಗನಕಲ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಶ್ರೀಲಕ್ಷ್ಮಿ ಆರ್.ಎ., ಚರ್ಮರೋಗ ತಜ್ಞರಾದ ಡಾ. ಸೋನಾಲಿ ಸಂಗನಕಲ್, ಮಕ್ಕಳ ಹಾಗೂ ನವಜಾತ ಶಿಶು ತಜ್ಞರಾದ ಡಾ. ವೀರೇಶ್ ಅವರು ಸಾರ್ವಜನಿಕರಿಗೆ ಸೇವೆ ನೀಡಲಿದ್ದಾರೆ.
ಈ ಆರೋಗ್ಯ ಶಿಬಿರದಲ್ಲಿ ನೆಗಡಿ, ಕೆಮ್ಮು, ಜ್ವರ, ರಕ್ತದ ಒತ್ತಡ (ಬಿ.ಪಿ.), ಸಕ್ಕರೆ ಕಾಯಿಲೆ, ಮಹಿಳೆಯರ ಆರೋಗ್ಯ ಸಮಸ್ಯೆಗಳು, ಚರ್ಮ ಸಂಬಂಧಿತ ಕಾಯಿಲೆಗಳು, ಮಕ್ಕಳ ಆರೋಗ್ಯ ಸಮಸ್ಯೆಗಳು ಸೇರಿದಂತೆ ವಿವಿಧ ಕಾಯಿಲೆಗಳ ತಪಾಸಣೆ ಮತ್ತು ಸಲಹೆ ನೀಡಲಾಗುತ್ತದೆ.
ಸಾರ್ವಜನಿಕರು ಈ ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448655189, 9844867399, 7899783315, 6361570565 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.





