ಬೆಳಗಾಯಿತು ವಾರ್ತೆ |www.bealagayithu.in
ಬಳ್ಳಾರಿ: ಜಿಲ್ಲೆಯ ನೂತನ ಎಸ್‌ಪಿಯಾಗಿ ಡಾ.ಶೋಭರಾಣಿ ವಿ.ಜಿ ಯವರು ನೇಮಕವಾಗಿದ್ದಾರೆ. ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರನ್ನು ವರ್ಗಾವಣೆ ಮಾಡಿ ಆ ಜಾಗಕ್ಕೆ ಡಾ. ಶೋಭರಾಣಿಯವರನ್ನು ಸರ್ಕಾರ ವರ್ಗಾಮಾಡಿದೆ. ಇವರು ಬಳ್ಳಾರಿ ಜಿಲ್ಲೆಯ ಪ್ರಥಮ ಮಹಿಳಾ ಎಸ್ಪಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಶೋಭಾರಣಿ ಅವರು ಪ್ರಸ್ತುತ ಬೆಂಗಳೂರಿನ ಬೃಹತ್ ಮಾಹಾನಗರ ಪಾಲಿಕೆಯ ಕಾರ್ಯತಂಡ ಹೆಚ್ಚುವರಿ ಡಿಜಿಪಿಯಾಗಿದ್ದರು.
2008 ರಲ್ಲಿ ಕೆಎಸ್ಪಿಎಸ್ ಉತ್ತೀರ್ಣರಾಗಿ ಬೆಂಗಳೂರಿನಲ್ಲಿ ಸಂಚಾರಿ ವಿಭಾಗದ ಡಿಸಿಪಿಯಾಗಿ ಕರ್ತವ್ಯಕ್ಕೆ ಸೇರದವರು, ನಂತರ ತುಮಕೂರಿನಲ್ಲಿ ಅಡಿಷನ್ ಎಸ್ಪಿಯಾಗಿ ಬಳಿಕ ಹಾಸನದಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿದಾರೆ.





