ಜಿಕೆ ಸ್ವಾಮಿ ಮೇಲೆ ಎಕಾಏಕಿ ಎಫ್‌ಐಆರ್ ದಾಖಲು: ಅಭಿಮಾನಿಗಳಿಂದ ಹೋರಾಟಕ್ಕೆ ಸಜ್ಜು

ಬೆಳಗಾಯಿತು ವಾರ್ತೆ
ಬಳ್ಳಾರಿ:
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಜಿಕೆ ಸ್ವಾಮಿ ಅವರ ಹುಟ್ಟು ಹಬ್ಬದ ಅಂಗವಾಗಿ ಸೆ.01 ರಂದು ಅವರ ಮನೆಯ ಕಾಂಪೌAಡನಲ್ಲಿ ಕಟೌಟ್ ಅಳವಡಿಸಲಾಗಿತ್ತು. ಆದರೆ, ಪಾಲಿಕೆಯ ಅಧಿಕಾರಿಗಳು ಕೆಲವ ಮಾತು ಕೇಳಿ ಏಕಾಏಕಿ ಜೆಕೆ ಸ್ವಾಮಿ ಅವರ ಮೇಲೆ ಎಫ್‌ಐಆರ್ ದಾಖಲು ಮಾಡಿರುವುದು ಖಂಡನೀಯ ಎಂದು ಕಟ್ಟೆ ಸ್ವಾಮಿ ಅವರು ಆರೋಪಿಸಿದರು.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಜಿಕೆ ಪೌಂಡೇಷನ್ ವತಿಯಿಂದ ಜಿಕೆ ಸ್ವಾಮಿ ಅವರ ನೇತೃತ್ವದಲ್ಲಿ ಸಮಾಜಸೇವೆ ಮಾಡುತ್ತಾ ಬಂದಿದ್ದಾರೆ. ಆದರೆ ಪಾಲಿಕೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಎಕಾಏಕಿ ಎಫ್‌ಐರ್ ದಾಖಲು ಮಾಡಿರೋದು ರಾಜಕೀಯ ಷಡ್ಯಂತ್ರದ ಉದ್ದೇಶವಾಗಿದೆ ಎಂದು ಅವರು ಆರೋಪಿಸಿದರು.
ಈ ಕುರಿತು ಮತ್ತೆ ಕುಲಂಕುಶವಾಗಿ ತನಿಖೆ ಮಾಡಿ ದಾಖಲು ಮಾಡಿರುವ ಎಫ್‌ಐಆರ್‌ನ್ನು ಹಿಂದಕ್ಕೆ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಪ್ರಕಾರವಾಗಿ ಪಾಲಿಕೆ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಕೆ ಫೌಂಡೇಶನ್ ಕೋರ್ ಕಮಿಟಿ ಸದಸ್ಯರಾದ ಶಿವು ಸ್ವಾಮಿ, ಗೋವಿಂದ, ಶ್ರೀನಿವಾಸ, ಮಣಿಕಂಠ, ಮುಸ್ತಾಫ, ಶೋಭಾ, ಅಂಬಿಕಾ ಸೇರಿದಂತೆ ಮತ್ತಿತರರು ಹಾಜರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles