ಬೆಳಗಾಯಿತು ವಾರ್ತೆ
ಬಳ್ಳಾರಿ: ಪೊಲಾ ಪ್ಯಾರಾಡೈಸ್ ಮಾಲೀಕರಾದ ಪೊಲಾ ಪ್ರವೀಣ್ ಕುಮಾರ್ ರವರು ಪ್ರಸಿದ್ಧ ಹೋಟೆಲ್ ಉಧ್ಯಮಿಯಾಗಿದ್ದು, ಗೋ ಶಾಲೆ ನಿರ್ವಹಣೆ, ವಿದ್ಯಾರ್ಥಿಗಳಿಗೆ ಸ್ಕಾಲರ್ಷಿಪ್, ಧಾರ್ಮಿಕ ಕ್ಷೇತ್ರಗಳಿಗೆ ಕೊಡುಗೆ ಹೀಗೆ ಸಾಕಷ್ಟು ಸಮಾಜ ಸೇವೆಗಳನ್ನು ಮಾಡುವುದರ ಜೊತೆಗೆ ಕಲಾಸೇವೆ ಮಾಡಲು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ.
ಸಿನಿಮಾ ರಂಗಕ್ಕೆ ಕಾಲಿಟ್ಟು ಪ್ರಥಮ ಬಾರಿಗೆ ಅವರು ಉತ್ತಮ ಸಂದೇಶ ಉಳ್ಳ ಸಿನಿಮಾ ಮಾಡವ ಉದ್ದೇಶದಿಂದ ಶಿಖಂಡಿ ಎನ್ನುವ ಮಹಾಭಾರತದ ಕಥೆಯುಳ್ಳ ಸಿನಿಮಾವನ್ನು ಮಾಡಿದ್ದಾರೆ. ಇನ್ನೂ ಈ ಸಿನಿಮಾ ಮೇ ತಿಂಗಳಿನಲ್ಲಿ ತೆರೆ ಕಾಣಲಿದೆ ಎಂದು ಅವರು ತಿಳಿಸಿದ್ದಾರೆ.





