ಬಳ್ಳಾರಿಯಲ್ಲಿ 530.78 ಕೋಟಿ ಮೌಲ್ಯದ 111.411 ಎಕರೆ ಸರ್ಕಾರಿ ಜಮೀನು ಒತ್ತುವರಿ ತೆರವು

ಬೆಳಗಾಯಿತು ವಾರ್ತೆ| Www.belagayithu.in
ಬಳ್ಳಾರಿ: ಬಳ್ಳಾರಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಅನಧಿಕೃತವಾಗಿ ಒತ್ತುವರಿಯಾಗಿದ್ದ 111.411 ಎಕರೆ ಸರ್ಕಾರಿ ಜಮೀನನ್ನು ಜಿಲ್ಲಾಡಳಿತ ಯಶಸ್ವಿಯಾಗಿ ತೆರವುಗೊಳಿಸಿದೆ. ಮರುಸ್ವಾಧೀನಪಡಿಸಿಕೊಳ್ಳಲಾದ ಈ ಆಸ್ತಿಯ ಸರ್ಕಾರಿ ಮಾರ್ಗಸೂಚಿ ಅಂದಾಜು ಮೌಲ್ಯ 530,78,91,581 (530.78 ಕೋಟಿಗೂ ಅಧಿಕ) ಎಂದು ಅಂದಾಜಿಸಲಾಗಿದೆ.
ಜಿಲ್ಲೆಯ ಜನಪ್ರತಿನಿಧಿಗಳ ಒತ್ತಾಯ ಹಾಗೂ ಸಾರ್ವಜನಿಕ ಆಸ್ತಿ ಸಂರಕ್ಷಣೆಯ ಉದ್ದೇಶದಿಂದ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಚಿಸಲಾದ ‘ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ’ ಜುಲೈ 6, 2026ರಂದು ಜಿಲ್ಲಾಧಿಕಾರಿಗಳಿಗೆ ಮಧ್ಯಂತರ ವರದಿ ಸಲ್ಲಿಸಿದೆ.
ವರದಿಯ ಪ್ರಕಾರ, ಏಪ್ರಿಲ್ 10ರಿಂದ ಜೂನ್ 20, 2026ರವರೆಗೆ ಬಂಡಿಹಟ್ಟಿ, ಹವಂಭಾವಿ, ನಲ್ಲಚೆರವು, ರೂಪನಗುಡಿ ರಸ್ತೆ, ಏರ್‌ಪೋರ್ಟ್ ರಸ್ತೆ ಮತ್ತು ಕೋಟೆ ಪ್ರದೇಶ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಒಟ್ಟು 12 ಬೃಹತ್ ಕಾರ್ಯಾಚರಣೆಗಳನ್ನು ನಡೆಸಿ ಒತ್ತುವರಿ ತೆರವುಗೊಳಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಅಂದ್ರಾಳ್ ಪ್ರದೇಶದ 49.29 ಎಕರೆ ಸರ್ಕಾರಿ ಜಮೀನು (ಅಂದಾಜು ಮೌಲ್ಯ 49.18 ಕೋಟಿ) ಹಾಗೂ ಹವಂಭಾವಿಯ 11.59 ಎಕರೆ ಜಮೀನು (ಅಂದಾಜು ಮೌಲ್ಯ 176.70 ಕೋಟಿ) ಪ್ರಮುಖವಾಗಿಮರುಸ್ವಾಧೀನ ಪಡಿಸಿಕೊಳ್ಳಲಾಗಿದೆ.
ತೆರವುಗೊಳಿಸಲಾದ ಸರ್ಕಾರಿ ಜಮೀನನ್ನು ಸಾರ್ವಜನಿಕ ಹಿತಾಸಕ್ತಿಯ ಅಭಿವೃದ್ಧಿ ಯೋಜನೆಗಳಿಗೆ ಬಳಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ. ಮುರಾರ್ಜಿ ದೇಸಾಯಿ ವಸತಿ ಶಾಲೆಗಳು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಪೊಲೀಸ್ ಇಲಾಖೆಯ ಎಸ್‌ಪಿ ಮತ್ತು ಡಿಐಜಿಪಿ ಕಚೇರಿ ಹಾಗೂ ನಿವಾಸಗಳು, ಬಯೋ ಇನ್ನೋವೇಷನ್ ಸೆಂಟರ್, ಅಲ್ಪಸಂಖ್ಯಾತರ ವಸತಿ ನಿಲಯ ಮತ್ತು ಅಂಗನವಾಡಿಗಳ ನಿರ್ಮಾಣಕ್ಕೆ ಈ ಜಾಗವನ್ನು ಮೀಸಲಿಡುವಂತೆ ಶಿಫಾರಸು ಮಾಡಲಾಗಿದೆ.
ಭವಿಷ್ಯದಲ್ಲಿ ಯಾವುದೇ ಕಾನೂನು ತೊಡಕುಗಳು ಎದುರಾಗದಂತೆ ನ್ಯಾಯಾಲಯಗಳಲ್ಲಿ ಕ್ಯಾವಿಯಟ್ ಸಲ್ಲಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದೇ ವೇಳೆ, ಕೆಲ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನೂ ದಾಖಲಿಸಲಾಗಿದೆ. ಮರುಸ್ವಾಧೀನಪಡಿಸಿಕೊಂಡ ಜಮೀನಿಗೆ ತಂತಿ ಬೇಲಿ ಅಳವಡಿಸುವ ಕಾರ್ಯ ಆರಂಭವಾಗಿದ್ದು, ಉಳಿದಿರುವ ಒತ್ತುವರಿಗಳನ್ನು ಸಹ ನಿಗದಿತ ಅವಧಿಯೊಳಗೆ ತೆರವುಗೊಳಿಸಿ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ತಿಳಿಸಿದೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles