ಬೆಳಗಾಯಿತು ವಾರ್ತೆ
ಬಳ್ಳಾರಿ: ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಸರ್ಕಾರದ ಹೆಸರಿನಲ್ಲಿರುವ, ಸರ್ಕಾರಿ- ಸಂಘ ಸಂಸ್ಥೆಗಳಿಗೆ ಮಂಜೂರಾದ, ವಿವಿಧ ಉದ್ದೇಶಗಳಿಗೆ ಭೂಸ್ವಾಧೀನವಾದ, ವಿವಿಧ ಮಂಡಳಿಗಳ ಹೆಸರಿನಲ್ಲಿರುವ ಸರ್ಕಾರಿ ಜಮೀನುಗಳನ್ನು ಅನಧಿಕೃತವಾಗಿ ಒತ್ತುವರಿ ಮಾಡಿ, ಅಕ್ರಮವಾಗಿ ನೋಂದಾಣಿ ಮಾಡಿಕೊಂಡು ಜಮೀನು, ನಿವೇಶನಗಳನ್ನು ಮಾರಾಟ ಮಾಡುವುದನ್ನು ತಡೆಯಲು ಹಾಗೂ ಸರ್ಕಾರಿ ಜಮೀನು, ನಿವೇಶನಗಳನ್ನು ಸಂರಕ್ಷಿಸಲು, ಅನಧಿಕೃತವಾಗಿ ಒತ್ತುವರಿ ಮಾಡಿರುವ ಪ್ರಕರಣಗಳನ್ನು ಗುರುತಿಸಿ, ಒತ್ತುವರಿ ಮಾಡಿರುವವರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಕೈಗೊಂಡು, ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸಲು ವಿಶೇಷ ಕಾರ್ಯಪಡೆ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.
ಒತ್ತುವರಿ ಸ್ಥಿರಪಟ್ಟಲ್ಲಿ ಕೂಡಲೇ ಮೇಲಿನ ಸಮಿತಿಗೆ ವರದಿಯನ್ನು ಸಲ್ಲಿಸಿ, ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 104 ಮತ್ತು 192ಎ ರಡಿಯಲ್ಲಿ ಕೂಡಲೇ ಒತ್ತುವರಿಯನ್ನು ನಿಯಮಾನುಸಾರ ತೆರವುಗೊಳಿಸಲು ತಹಸೀಲ್ದಾರರು ಕ್ರಮ ಜರುಗಿಸುವುದು.
ಮೇಲಿನ ಸಮಿತಿಯು ಒತ್ತುವರಿ ತೆರವುಗೊಳಿಸಲು ಕಾಲಮಿತಿ ನಿಗಧಿಪಡಿಸಿ, ಪ್ರತಿ ತಿಂಗಳಿಗೊಮ್ಮೆ ಸಮಿತಿ ಸಭೆಯನ್ನು ಕರೆದು ಒತ್ತುವರಿಗೊಳಿಸುವಲ್ಲಿ ಸಾಧಿಸಿರುವ ಪ್ರಗತಿ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಭೆಯ ನಡವಳಿಗನ್ನು ಸಲ್ಲಿಸುವುದು. ಗುರುತರವಾದ ಪ್ರಕರಣವಿದ್ದಲ್ಲಿ ಕೂಡಲೇ ವರದಿಯನ್ನು ಮಾಡತಕ್ಕದ್ದು. ಮೇಲಿನಂತೆ ಕ್ರಮ ಜರುಗಿಸಿ ಪ್ರತಿ ತಿಂಗಳು ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಲು ನಿರ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ





