ಬೆಳಗಾಯಿತು ವಾರ್ತೆ | http://www.belagayithu.in
ಬಳ್ಳಾರಿ : ಸಿಲೆಂಡರ್ ಸಂಪರ್ಕವನ್ನು ಉಚಿತವಾಗಿ ನೀಡಿದ ಕೇಂದ್ರ ಸರ್ಕಾರಕ್ಕೆ ಅಡುಗೆ ಸಿಲಿಂಡರ್ ಪೂರೈಕೆ ಮಾಡಲು ಆಗುತ್ತಿಲ್ಲ ದೇಶದ ನಾಗರಿಕರಿಗೆ ಬೇಕಾದಷ್ಟು ಅಡುಗೆ ಅನಿಲವನ್ನು ಸಮರ್ಪಕವಾಗಿ ವಿತರಿಸುವಂತೆ ಆಗ್ರಹಿಸಿ ಬುಧವಾರ ರಾಯಲ್ ವೃತ್ತದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂಪ್ರಶಾಂತ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ನಂತರ ಮಾತನಾಡಿದ ಜಿಲ್ಲಾಧ್ಯಕ್ಷ, ಕೇಂದ್ರ ಬಿಜೆಪಿ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವಗುರುವೆಂದು ಪೂಸಿ ಬಿಡುತ್ತಿದ್ದಾರೆ ಇವರಿಗೆ ದೇಶದ ನಾಗರಿಕರಿಗೆ ಬೇಕಾದಂತ ಅಗತ್ಯವಾದ ಅಡಿಗೆ ಅನಿಲವನ್ನು ಸರಿಯಾಗಿ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಇದರಿಂದ ದೇಶದಲ್ಲಿ ಹೋಟೆಲ್ ಸೇರಿದಂತೆ ವಾಣಿಜ್ಯ ಉದ್ಯಮಗಳು ಗೃಹ ಬಳಕೆಯ ಸಿಲಿಂಡರ್ ಗಳು ಸಿಗದೇ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ ದೇಶದ ನಾಗರಿಕರಿಗೆ ಬೇಕಾದ ಅಡುಗೆ ಅನಿಲವನ್ನು ಸಮರ್ಪಕ ರೀತಿಯಲ್ಲಿ ಮೊದಲು ಪೂರೈಕೆ ಮಾಡಲಿ ಎಂದು ಅವರು ಆಗ್ರಹಿಸಿದರು.





