38.5 C
Bellary
Saturday, April 27, 2024

Localpin

spot_img

ಕಂಪ್ಲಿ ರೈತರ ನೆರವಿಗೆ ನಿಲ್ಲುವೆ:ಶ್ರೀರಾಮುಲು

ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: ಕಂಪ್ಲಿ ಭಾಗದ ರೈತಾಪಿ ಜನರಿಗೆ ಈ ಹಿಂದಿನಿಂದಲೂ ವಿಜಯನಗರ ಅರಸರೇ ನೆರವಾಗಿದ್ರೂ. ವಿಜಯನಗರ ಅರಸರ ಕಾಲದಿಂದ ಇಲ್ಲಿಯವರೆಗೆ 2600 ಸಾವಿರ ಹೆಕ್ಟೇರ ಪ್ರದೇಶಗಳಲ್ಲಿ 11 ತಿಂಗಳು ನೀರು ಕೊಡುವಂತಹ ವಾಗ್ದಾನ ಮಾಡಿದ್ರೂ ಅಂದ್ರೇ ಕಂಪ್ಲಿ ಭಾಗದ ರೈತ ಹಿತವನ್ನು ಸ್ವತಃ ವಿಜಯನಗರ ಅರಸರು ಮಾಡಿದ್ರೂ ಇನ್ನೂ ಕಂಪ್ಲಿ ಭಾಗದ ರೈತರ ನೀರಿನ ಬವಣೆನಿಂತಿಲ್ಲ ಎಂದು ಬಿ ಶ್ರೀರಾಮುಲು ಅವರು ಕಳವಳ ವ್ಯಕ್ತಪಡಿಸಿದರು.
ಬಳ್ಳಾರಿ ಲೋಕಸಭಾ ಕ್ಷೇತ್ರದ ಕಂಪ್ಲಿ ವಿಧಾನಸಭಾ ಕ್ಷೇತ್ರದ ದೇವಲಾಪೂರ.ಜವುಕು.ಸುಗ್ಗೇನಹಳ್ಳಿ ಸೇರಿದಂತೆ ವಿವಿಧ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಈ ವರ್ಷ ಬರಗಾಲದಿಂದ ಕಬ್ಬು ಬೆಳೆಗೆ ಸಂಪೂರ್ಣ ನೀರು ಸಿಗದೇ ಈ ಭಾಗದ ರೈತರು ಕಂಗಾಲಾಗಿದ್ದಾರೆ. ವಿಜಯನಗರದ ಅರಸರ ಕಾಲದಲ್ಲಿಯೇ ವಿದೇಶಕ್ಕೆ ಈ ಭಾಗದ ಕಬ್ಬು ರಫ್ತು ಮಾಡಲಾಗುತಿತ್ತು.ಹೀಗಾಗಿ ವಿಜಯನಗರ ಅರಸರು 11 ತಿಂಗಳು ಈ ಭಾಗಕ್ಕೆ ನೀರು ಬೇಕಿದೆ ಎಂದು ಅರಿತುಕೊಂಡು ನೀರು ಹರಿಸಲು ನಿಯಮ ಮಾಡಿದರು. ಆದ್ರೂ ನೀರು ಸಿಗ್ತಿಲ್ಲ ಮುಂದಿನ ದಿನಗಳಲ್ಲಿ ಲಿಫ್ಟ ಇರಿಗೇಷನ್ ಮೂಲಕ ರೈತರಿಗೆ ನೀರು ಹರಿಸಲು ಪ್ರಯತ್ನ ಮಾಡುವುದಾಗಿ ಹೇಳಿದರು.
ಕಂಪ್ಲಿ ಭಾಗದ ರೈತರ ಬಹು ದಿನಗಳ ಕನಸು ಸಕ್ಕರೆ ಕಾರ್ಖಾನೆ ಆಗಬೇಕೆನ್ನುವದು.ಶೀಘ್ರವಾಗಿ ಆ ಕನಸು ನನಸು ಮಾಡುವ ಕೆಲಸ ಮಾಡುವೆ ಇನ್ನೂ ಭಾರತದ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆ ಹೆಗ್ಗಳಿಕೆ ಕಂಪ್ಲಿ ಕಾರ್ಖಾನೆ ಪಾತ್ರವಾಗಿತ್ತು. ಈಗ ಬಂದ್ ಆಗಿದೆ ಮತ್ತೆ ಸಕ್ಕರೆ ಕಾರ್ಖಾನೆ ಆರಂಭ ಮಾಡುವ ಮೂಲಕ ರೈತರ ನೆರವಿಗೆ ನಿಲ್ಲುವೆ ಎಂದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್,ಮಾಜಿ ಶಾಸಕ ಟಿ.ಹೆಚ್, ಸುರೇಶಬಾಬು, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಮುಖಂಡರಾದ ರಾಮಲಿಂಗಪ್ಪ ಸೇರಿದಂತೆ ಇನ್ನೀತರರು ಭಾಗಿಯಾಗಿದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles