30 C
Bellary
Friday, April 25, 2025

Localpin

spot_img

ಪ್ರಧಾನಿ ಮೋದಿ- ಬಿಲ್ ಗೇಟ್ಸ್ ಸಂವಾದ

ಬೆಳಗಾಯಿತು ವಾರ್ತೆ |www.belagayithu.in
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಶುಕ್ರವಾರ ದೆಹಲಿಯ ಪ್ರಧಾನ ಮಂತ್ರಿ ನಿವಾಸದಲ್ಲಿ ಕೃತಕ ಬುದ್ಧಿಮತ್ತೆಯಿಂದ(Artificial Intelligence) ಹಿಡಿದು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಹವಾಮಾನ ಬದಲಾವಣೆ, ಭಾರತದ ಕೃಷಿ, ಆರ್ಥಿಕ ಕ್ಷೇತ್ರ ಹೀಗೆ ಹಲವು ವಿಚಾರಗಳ ಕುರಿತು ವ್ಯಾಪಕವಾಗಿ ಚರ್ಚಿಸಿದ್ದಾರೆ. ಸಂಭಾಷಣೆಯಲ್ಲಿ, ಬಿಲ್ ಗೇಟ್ಸ್ ಭಾರತೀಯರು ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳುವ ಮತ್ತು ಮುನ್ನಡೆಸುವ ಸಾಮರ್ಥ್ಯವನ್ನು ಹೊಗಳಿದರು.
2023ರ ಜಿ20 ಶೃಂಗಸಭೆಯ ಕುರಿತು ಪ್ರಧಾನಿ ಮೋದಿ-ಬಿಲ್ ಗೇಟ್ಸ್ ಮಾತುಕತೆ: ಭಾರತದ ಅಧ್ಯಕ್ಷತೆಯಲ್ಲಿ ಕಳೆದ ವರ್ಷ ಮುಕ್ತಾಯಗೊಂಡ 2023 ರ ಜಿ 20 ಶೃಂಗಸಭೆಯನ್ನು ಚರ್ಚಿಸಿದ ಪ್ರಧಾನಿ ಮೋದಿ, “ಜಿ 20 ಶೃಂಗಸಭೆಯ ಮೊದಲು ನಾವು ವ್ಯಾಪಕವಾದ ವಿಷಯಗಳ ಕುರಿತು ಚರ್ಚೆ ನಡೆಸಿದ್ದೇವೆ. ನೀವು ನೋಡಿದಂತೆ, ಶೃಂಗಸಭೆಯ ಪ್ರಕ್ರಿಯೆಗಳು ಸಾಕಷ್ಟು ತಿರುವುಗಳನ್ನು ಪಡೆದುಕೊಂಡವು. ನಾವು ಈಗ ಜಿ 20 ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ನಾವು ಈಗ G20 ನ ಪ್ರಮುಖ ಉದ್ದೇಶಗಳೊಂದಿಗೆ ಹೊಂದಾಣಿಕೆ ಮಾಡಿದ್ದೇವೆ, ಅವುಗಳನ್ನು ಮುಖ್ಯವಾಹಿನಿಗೆ ತರುತ್ತೇವೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles