ಬುದ್ದ ಪೂರ್ಣಿಮೆ ಆಚರಣೆ: ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ದೇವನಾಮ ಪ್ರಿಯ ಬಯಲು ಬುದ್ಧ ವಿವಾರ ಟ್ರಸ್ಟ್ ವತಿಯಿಂದ ಸಂಗನಕಲ್ಲು ಬುದ್ಧವಾರದಲ್ಲಿ 2570ನೇ ಬುದ್ಧ ಪೂರ್ಣಿಮೆ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಶುಕ್ರವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಶರಣ ಪಂಚಶೀಲರ ಪಠಣದೊಂದಿಗೆ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ಇದೇ ಸಂದರ್ಭದಲ್ಲಿ 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 90 ಶೇಕಡಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮಕ್ಕೆ ಕಪ್ಪಗಲ್ಲು ಓಂಕಾರಪ್ಪ ಅಧ್ಯಕ್ಷತೆ ವಹಿಸಿದ್ದರು. ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರಾದ ಗಾದೆಪ್ಪ, ಪನ್ನರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಂಗನಕಲ್ಲು ವಿಜಯ್ ಕುಮಾರ್, ಎರ್ರಣ್ಣ, ಮೆಹತಾಬ್ (ನಿವೃತ್ತ ಶಿಕ್ಷಕರು), ಕಪ್ಪಗಲ್ಲು ಬಾಬು ಸಾರ್ (ಮುಖ್ಯ ಗುರುಗಳು, ಸರ್ಕಾರಿ ಪ್ರೌಢಶಾಲೆ), ಧರ್ಮಣ್ಣ ಶಿಕ್ಷಕರು, ಸಿ. ಶಿವಕುಮಾರ್ (ಜಿಲ್ಲಾ ಛಲವಾದಿ ಮಹಾಸಭಾಧ್ಯಕ್ಷರು), ಗೋವಿಂದರಾಜ್ ನಾಗಲಕರಿ, ನರಸಪ್ಪ, ನಾಗರತ್ನ, ಬಂತೇಜಿ ನಾಗರಾಜ್ ಕೆ., ಲಿಂಗಪ್ಪ, ಸಿ. ಶಂಕರ್, ಹೊನ್ನೂರಪ್ಪ, ಕಪ್ಪಗಲ್ ಚಂದ್ರ, ಲಿಂಗದೇವನಹಳ್ಳಿ ನಾಗೇಂದ್ರ, ಮೋಕ ಹನುಮಂತ, ಕೊಳಗಲ್ ಸೂರಿ, ಕಪ್ಪಗಲ್ ಸಂಗನಕಲ್ ಚಂದ್ರ ಮತ್ತು ಮಹೇಂದ್ರ ಸೇರಿದಂತೆ ಹಲವು ಗಣ್ಯರು ಹಾಗೂ ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles