ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ನಗರದ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ ಆರೋಪಿಯನ್ನು ಬಂಧಿಸಿ 13 ಮೋಟಾರ್ ಸೈಕಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಬೈಕ್ ಕಳ್ಳತನ ಪ್ರಕರಣ (ಕ್ರೈಂ ನಂ. 34/2026) ಸಂಬಂಧವಾಗಿ ಡಿ.ಎಸ್.ಪಿ ಗೋವಿಂದರಾಜು ಅವರ ಮಾರ್ಗದರ್ಶನದಲ್ಲಿ, ಪಿ.ಐ ರವಿಚಂದ್ರ ಡಿ.ಜಿ, ಪಿ.ಎಸ್.ಐ ಕೆ. ವಿರುಪಾಕ್ಷಪ್ಪ ಹಾಗೂ ಸಿಬ್ಬಂದಿ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಬಿ. ಜಯರಾಮ, ನಾರಾಯಣ, ರಾಮದಾಸ, ಮಹಾಲಿಂಗಪ್ಪ, ಟಿ. ತಿಮ್ಮಪ್ಪ, ಕೋಸಿಗಿ ಕಾಳಿಂಗಪ್ಪ, ಮಂಜುನಾಥ, ವಿಜಯ್ ಭಾಸ್ಕರ್ ಮತ್ತು ಶಾಹಿದ ಭಾನು ಭಾಗವಹಿಸಿದ್ದರು.
ಏ. 30 ರಂದು ವಲಸೆ ರಾಜ (37), ತಂದೆ ವಲಸೆ ಈರಣ್ಣ, ಹಮಾಲಿ/ಟ್ರಾಕ್ಟರ್ ಚಾಲಕ, ಮೂಲತಃ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಆಲೂರು ತಾಲ್ಲೂಕಿನ ಮಾಚನೂರು ಗ್ರಾಮದ ನಿವಾಸಿಯನ್ನು ಬಂಧಿಸಲಾಗಿದೆ. ಆರೋಪಿಯು ಗಾಂಧಿನಗರ ಹಾಗೂ ಬ್ರೂಸ್ ಪೇಟೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಯಿಂದ ಸುಮಾರು ₹6.50 ಲಕ್ಷ ಮೌಲ್ಯದ ಒಟ್ಟು 13 ಮೋಟಾರ್ ಸೈಕಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತನ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅವರು ಈ ಕಾರ್ಯಾಚರಣೆಯನ್ನು ಪ್ರಶಂಸಿಸಿದ್ದಾರೆ





