ಬೆಳಗಾಯಿತು ವಾರ್ತೆ| Www.belagayithu.in
ಬಳ್ಳಾರಿ: ಪಶ್ಚಿಮ ಬಂಗಾಳ, ಪಾಂಡಿಚೇರಿ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಬಿಜೆಪಿ ಸಾಧಿಸಿದ ಗಮನಾರ್ಹ ಜಯದ ಹಿನ್ನೆಲೆ ನಗರದ ಹೃದಯಭಾಗದಲ್ಲಿರುವ ರಾಯಲ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ವಿಜಯೋತ್ಸವ ಆಚರಿಸಿದರು.
ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು.
ವಿಧಾನ ಪರಿಷತ್ ಸದಸ್ಯ ವೈ.ಎಮ್ ಸತೀಶ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪರ ಆಡಳಿತಕ್ಕೆ ಜನತೆ ಮನ್ನಣೆ ನೀಡಿರುವುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ ಎಂದು ಹೇಳಿದರು. ಪಶ್ಚಿಮ ಬಂಗಾಳದಲ್ಲಿಯೂ ಬಿಜೆಪಿ ತನ್ನ ನೆಲೆಯನ್ನು ಬಲಪಡಿಸಿರುವುದು ಪಕ್ಷದ ಸಂಘಟನೆ ಶಕ್ತಿಗೆ ಸಾಕ್ಷಿ ಎಂದರು. ಇದೇ ಗೆಲುವಿನ ಸರಣಿ ಮುಂದುವರಿದು ರಾಜ್ಯದಲ್ಲಿಯೂ ಪಕ್ಷ ಮತ್ತಷ್ಟು ಬಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ ಕುಮಾರ್ ಮೋಕ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿದ ಫಲಿತಾಂಶ ದೇಶದಾದ್ಯಂತ ಪಕ್ಷದ ಬಲವನ್ನು ತೋರಿಸಿದೆ ಎಂದರು. ಈ ಗೆಲುವಿನ ಅಲೆ ರಾಜ್ಯದಲ್ಲೂ ಬೀಸಲಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಕಾಣಿಸಿಕೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.
ವಿಜಯೋತ್ಸವದಲ್ಲಿ ಮಾಜಿ ಸಂಸದ ಸಣ್ಣ ಫಕೀರಪ್ಪ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್. ದಿವಾಕರ್, ಬುಡಾ ಮಾಜಿ ಅಧ್ಯಕ್ಷ ಮಾರುತಿ ಪ್ರಸಾದ್ ಸರ್ವಶೆಟ್ಟಿ, ಪಾಲಿಕೆ ಸದಸ್ಯರಾದ ಸುರೇಖಾ ಮಲ್ಲನಗೌಡ, ಕೆ. ಹನುಮಂತಪ್ಪ, ಗುಡಿಗಂಟೆ ಹನುಮಂತಪ್ಪ, ಬಿಜೆಪಿ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಹಂಪಿ ರಮಣ, ಡಾ. ಅರುಣಾ ಕಾಮಿನೇನಿ ಸೇರಿದಂತೆ ಅನೇಕ ಗಣ್ಯರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕೆ. ರಾಮಲಿಂಗಪ್ಪ, ಅಡವಿಸ್ವಾಮಿ, ಓಂ ಪ್ರಕಾಶ್, ಮಲ್ಲೇಶ್ ಕುಮಾರ್, ಎಚ್. ಓಬಳೇಶ್, ಹನುಮೇಶ ಉಪ್ಪಾರ, ಹಲಕುಂದಿ ವೀರನಗೌಡ, ಶಂಕ್ರಪ್ಪ, ರಾಘವೇಂದ್ರ ಎಸ್. ಚಲುವಾದಿ, ಹನುಮಂತಪ್ಪ ಕೋಳೂರು, ಎರಂಗಳಿ ತಿಮ್ಮಾರೆಡ್ಡಿ, ಶರಣು ಆರ್. ಸೋಮನಗೌಡ, ರಬಿಯಾ, ಡಾ. ರೇಣುಕಾ ಸೇರಿದಂತೆ ಹಲವರು ಉಪಸ್ಥಿತರಿದ್ದು ಸಂಭ್ರಮದಲ್ಲಿ ಪಾಲ್ಗೊಂಡರು.





