23.4 C
Bellary
Friday, September 29, 2023

Localpin

spot_img

ಅಜ್ಜಯ್ಯ ತಾತನ ದೇವಸ್ಥಾನದ ಗೋಪುರ ಲೋಕಾರ್ಪಣೆ

ಬಳ್ಳಾರಿ: ತಾಲೂಕಿನ ಹೊನ್ನಾಳಿ ಗ್ರಾಮದಲ್ಲಿ ಭಾನುವಾರ ೧೭ನೇ ವರ್ಷದ ಶ್ರಾವಣ ಮಾಸದ ೨ನೇ ಸೋಮವಾರ ವಿಶೇಷ ಪೂಜೆ ಕಾರ್ಯಕ್ರಮ ಹಾಗೂ ಅಜ್ಜಯ್ಯ ತಾತನ ದೇವಸ್ಥಾನದ ಗೋಪುರ ಲೋಕಾರ್ಪಣೆ ಪೂಜಾ ಕಾರ್ಯಕ್ರ ಮವನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವಜನ ಸಬಲೀಕರಣ ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಉದ್ಘಾಟನೆ ಮಾಡಿದರು.

ನಂತರ ಮಾತನಾಡಿದ ಅವರು, ಅಜ್ಜಯ್ಯ ತಾತನವರ ಪವಾಡ ದೊಡ್ಡದು. ನನ್ನ ಮನೆಯ ಕಾರ್ಯಕ್ರಮ ಇದ್ದರೂ ಸಹಿತ ಇಂದು ನಾನು ಹೆಲಿಕ್ಯಾಪ್ಟರ್ ಮೂಲಕ ಅಜ್ಜಯ್ಯನ ತಾತನ ದೇವಸ್ಥಾನದ ಗೋಪುರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬಂದಿದ್ದೆನೆ. ನಾನು ನಿಮ್ಮ ಆಶೀರ್ವಾದದಿಂದ ಗೆದ್ದಿದ್ದೇನೆ. ಚುನಾವಣೆ ಸಮಯದಲ್ಲಿ ನನ್ನ ಕೈ ಹಿಡುದು ನನ್ನ ಈ ಸ್ಥಾನಕ್ಕೆ ತಂದಿದ್ದಿರಿ ನಿಮ್ಮೆಲ್ಲರಿಗೂ ನಾನು ಅಭಾರಿಯಾ ಗಿರುತ್ತೇನೆ ಎಂದರು.
ನಮ್ಮ ಜಿಲ್ಲೆಯ ಜನರಿಗೆ ಯಾವುದೇ ತೊಂದರೆಯಾಗದAತೆ ನಾನು ಶ್ರಮವಹಿಸುತ್ತೇನೆ. ನಿಮ್ಮ ಸಮಸ್ಯೆಗೆ ಸದಾ ನಾನು ನಿಮ್ಮ ಸೇವೆಗೆ ಇರುತ್ತೇನೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಅಜ್ಜಯ್ಯ ತಾತನ ದೇವಸ್ಥಾನದ ಧರ್ಮಕರ್ತರು ಡಿ ಮಲ್ಲಿಕಾರ್ಜು ನ ಮತ್ತು ಪಟೇಲ್ ರಾಮ ನಾಯಕ್, ಆರ್ ಟಿ ರಾಮುನಾ ಯಕ್.,ಶುವು, ಚಂದ್ರ, ಪ್ರಕಾಶ್,ವೆಂಕಟೇಶ್ ಹೊನ್ನಾಳಿ ಗ್ರಾಮದ ಕಾಂಗ್ರೆಸ್‌ನ ಮುಖಂಡರು, ಅನೇಕ ಅಜ್ಜಯ್ಯನ ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,874FollowersFollow
0SubscribersSubscribe
- Advertisement -spot_img

Latest Articles