ಬೆಳಗಾಯಿತು ವಾರ್ತೆ |www.bealagayithu.in
ಹೊಸಪೇಟೆ : ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಆಗಸ್ಟ್ 17ರಂದು ತುಂಗಭದ್ರಾ ಆಣೆಕಟ್ಟಿಗೆ ಭೇಟಿ ನೀಡಿದರು.
ಇದೆ ವೇಳೆ ಶಾಸಕರು, ಮೂರನೇ ಸ್ಟಾಪ್‌ಲಾಗ್ ಗೇಟ್ ಅಳವಡಿಕೆ ಕಾರ್ಯದ ವೀಕ್ಷಣೆ ನಡೆಸಿದರು. 3ನೇ ಗೇಟ್ ಅಳವಡಿಕೆ ಕಾರ್ಯ ಯಶ ಕಂಡ ಹಿನ್ನೆಲೆಯಲ್ಲಿ ಶಾಸಕರು ಆಣೆಕಟ್ಟಿಗೆ ಭೇಟಿ ನೀಡಿ ಹರ್ಷ ವ್ಯಕ್ತಪಡಿಸಿದರು.
ಗೇಟ್ ಅಳವಡಿಕೆಗೆ ಮಾರ್ಗದರ್ಶನ ಮಾಡಿದ ಡ್ಯಾಮ್ ತಜ್ಞ ಕಣ್ಣಯ್ಯ ನಾಯ್ಡು ಅವರು ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಮತ್ತು ಕಾರ್ಯನಿರ್ವಹಿಸಿದ ಪ್ರತಿಯೊಬ್ಬರಿಗೂ ಶಾಸಕರು ಇದೆ ವೇಳೆ ಅಭಿನಂದನೆಗಳು ತಿಳಿಸಿದರು.





