ಬೆಳಗಾಯಿತು ವಾರ್ತೆ |www.bealagayithu.in
ಕೊಪ್ಪಳ: ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ಗೇಟ್ ತುಂಡಾಗಿ, ಬರೋಬ್ಬರಿ 5 ದಿನಕ್ಕೆ 28ಕ್ಕೂ ಹೆಚ್ಚು ಟಿಎಂಸಿ ನೀರು ಪೋಲಾಗಿದೆ. ಉಳಿದ ನೀರನ್ನ ಉಳಿಸಲು ನಾಲ್ಕೈದು ದಿನದಿಂದ ತಜ್ಞರ ತಂಡ ಹರಸಾಹಸ ಪಡುತ್ತಿದೆ. ಈಗಾಗಲೇ ತಾತ್ಕಾಲಿಕ ಗೇಟ್ ಅಳವಡಿಕೆಗೆ ಕಾರ್ಯ ಚುರುಕುಗೊಂಡಿದ್ದು, ಡ್ಯಾಮ್ ಬಳಿಗೆ ಕ್ರಸ್ಟ್ ಗೇಟ್‌ನ ಪ್ಲೇಟ್‌ಗಳನ್ನು ತರಲಾಗುತ್ತಿದೆ.
ಸದ್ಯ ಡ್ಯಾಮ್‌ನಲ್ಲಿ 77 ಟಿಎಂಸಿ ನೀರಿದ್ದು, ಕನಿಷ್ಠ 65 ಟಿಎಂಸಿ ನೀರು ಉಳಿಸಲು ಪ್ರಯತ್ನ ಮಾಡಲಾಗುತ್ತಿದೆ.ಇದಕ್ಕಾಗಿ 10 ಮೀಟರ್ ಉದ್ದದ ನಾಲ್ಕು ಅಡಿ ಅಗಲದ ಮೂರು ಗೇಟ್‌ಗಳನ್ನು ಡ್ಯಾಮ್ ಬಳಿ ತರಲಾಗಿದೆ. ಸಂಜೆವರೆಗೆ ಮತ್ತೆರಡು ಪ್ಲೇಟ್‌ಗಳು ಬರಲಿದ್ದು, 65 ಟನ್ ತೂಕವಿರುವ ಸ್ಟಾಪ್ ಲಾಗ್ ಗೇಟ್‌ಗಳನ್ನು ಅಳವಡಿಸಲಿದ್ದಾರೆ.





