ಬಳ್ಳಾರಿ: ಕಲಾ ತಪಸ್ವಿ, ನಾಟ್ಯ ಕಲಾ ಪ್ರಪೂರ್ಣ ಬಳ್ಳಾರಿ ರಾಘವ ಅವರ 143ನೇ ಜಯಂತಿ ಹಿನ್ನೆಲೆ ನಗರ ರಾಯಲ್ ವೃತ್ತದಲ್ಲಿ ಬಳ್ಳಾರಿ ರಾಘವ ಪ್ರತಿಮೆಗೆ ಹಿರಿಯ ಕಲಾವಿದರು ಮಾಲಾರ್ಪಣೆ ಮಾಡಿದರು.ಬಳ್ಳಾರಿ ರಾಘವ ಅವರ ಜೀವನ ಮತ್ತು ಸಾಧನೆ ಗಳು ಕುರಿತು ಹಲವು ಹಿರಿಯ ಕಲಾವಿದರು ಮಾತನಾಡಿದರು.ಹಿರಿಯ ಕಲಾವಿದ ಜಗದೀಶ್ ಅವರು ಬಳ್ಳಾರಿ ರಾಘವರವರು ಭಾರತದಲ್ಲಿ ಹುಟ್ಟುವ ಮೊದಲೇ ಇಂಗ್ಲೆಂಡ್ ನಲ್ಲಿ ಹುಟ್ಟಿದ್ದರೆ ಶೇಕ್ಸ್ ಪಿಯರ್ ನಷ್ಟೆ ಪ್ರಸಿದ್ಧಿ ಪಡೆಯುತ್ತಿದ್ದರು ಎಂದು ಹೇಳಿದ ಅವರು ಶೇಕ್ಸ್ ಪಿಯರ್ ನಾಟಕಗಳನ್ನು ಬರೆಯಬಹುದು ಆದರೆ ರಾಘವ ಅವರು ಬರೆಯುವುದರ ಜೊತೆಗೆ ಅಭಿನಯದ ಮೂಲಕ ತೋರಿಸಿದ್ದೀರಿ ಎಂದು ಬರ್ನಾರ್ಡ್ ಷಾ ಅವರು ಹೇಳಿದ್ದಾರೆ ಎಂದು ಇಂದು ರಾಘವ ಮೆಮೋರಿಯಲ್ ಅಸೋಸಿಯೇಷನ್ ಬಳ್ಳಾರಿ ರಾಘವ ರವರ ೧೪೩ನೇ ಜಯಂತಿ, ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ನಾಟಕೋತ್ಸವ ನಗರದ ರಾಘವ ಕಲಾ ಮಂದಿರದಲ್ಲಿ ಸಂಜೆ ೬ಗಂಟೆಗೆ ಹಮ್ಮಿಕೊಳ್ಳಲಾಗಿದೆ.ಸಂದರ್ಭದಲ್ಲಿ ಹಿರಿಯ ಕಲಾವಿದ ಕೆಣಿಕಾರ ತಿಮ್ಮನಗೌಡ, ಹೆಚ್ ಎಂ ಜಗದೀಶ್, ವೀರೇಶಯ್ಯ ಸ್ವಾಮಿ, ನಾಗರಾಜ್ ಗೌಡ ಸೇರಿದಂತೆ ಇತರರು ಹಾಜರಿದ್ದರು.