ಬೆಳಗಾಯಿತು ವಾರ್ತೆ
ಬಳ್ಳಾರಿ:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆವರಣದಲ್ಲಿ 108 ಆಂಬುಲೆನ್ಸ್ ಆರೋಗ್ಯ ಕವಚ ದ ಪೈಲಾಟ್ ಸಿಬ್ಬಂದಿಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆವರಣದಲ್ಲಿ ಕೇಕ್ ಕತ್ತರಿಸಿ ನ್ಯಾಷನಲ್ ಪೈಲಟ್ ದಿನಾಚರಣೆ ಆಚರಿಸಲಾಯಿತು.
ಬಳ್ಳಾರಿ 108 ಆಂಬುಲೆನ್ಸ್ ಆರೋಗ್ಯ ಕವಚ ವ್ಯವಸ್ಥಾಪಕರಾದ ನವೀನ್ ಕುಮಾರ್ ಮಾತನಾಡಿ, ಪೈಲಾಟ್ ಸಿಬ್ಬಂದಿಗಳು ತುರ್ತು ಕರೆ ಬಂದಾಗ ತಕ್ಷಣ ಕಾರ್ಯ ಪ್ರವೃತರಾಗಿ ತಮ್ಮ ಚಾಲನ ಕೌಶಲ್ಯದಿಂದ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸುವುದುರೊಂದಿಗೆ ಜೀವ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಆಂಬುಲೆನ್ಸ್ ಅನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ನಿರ್ವಹಿಸಿ ಮತ್ತು ಅವರು ಪೂರ್ಣಪ್ರಮಾಣದ ತರಬೇತಿ ಪಡೆದಿರುತ್ತಾರೆ ಇದರಿಂದ ಅನೇಕ ಜೀವಗಳಿಗೆ ಮರುಜನ್ಮ ನೀಡುವ ಸಿಬ್ಬಂದಿಗಳಿಗೆ 108 ಆರೋಗ್ಯ ಕವಚ ಇಎಂಆರ್ ಐ ಗ್ರೀನ್ ಹೆಲ್ತ್ ಸರ್ವಿಸ್ ವತಿಯಿಂದ ಪ್ರತಿ ವರ್ಷ ಮೇ 26 ನ್ನು ಪೈಲಾಟ್ ದಿನಾಚರಣೆ ಆಗಿ ಆಚರಿಸುತ್ತಾರೆ ಇಂತಹ ಜೀವ ಉಳಿಸುವ ಕಾರ್ಯ ಮಾಡುವ ಸಿಬ್ಬಂದಿಗಳಿಗೆ ಇನ್ನಷ್ಟು ಶಕ್ತಿ ನೀಡಲಿ ಎಂದು ಅವರು ಹಾರೈಸಿದರು.




