35.8 C
Bellary
Saturday, April 26, 2025

Localpin

spot_img

1 ಕೋಟಿ ವಿದ್ಯುತ್​ ಬಿಲ್​ ಕಟ್ಟಿಲ್ಲ ಈ ವಿಶ್ವವಿದ್ಯಾಲಯ

ಬೆಳಗಾಯಿತು ವಾರ್ತೆ |www.belagayithu.in

ವಿಜಯನಗರ, ಫೆ.19: ಹಂಪಿ ಕನ್ನಡ ವಿಶ್ವವಿದ್ಯಾಲಯ 1 ಕೋಟಿ 5 ಲಕ್ಷ 74 ಸಾವಿರ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿ ಕೊಂಡಿದ್ದು, ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನೋಟಿಸ್​ ನೀಡಿದೆ. ವಿದ್ಯುತ್​ ಬಿಲ್​ ಬಾಕಿ ಉಳಿಸಿಕೊಂಡಿದ್ದರಿಂದ, ಜೆಸ್ಕಾಂ ಅಧಿಕಾರಿಗಳು ವಿಶ್ವವಿದ್ಯಾಲಯಕ್ಕೆ ವಿದ್ಯುತ್​ ಸರಬರಾಜು ಅನ್ನು ಸ್ಥಗಿತಗೊಳಿಸಿತ್ತು. ಆದರೆ “ನುಡಿ ಹಬ್ಬ” ಇದ್ದ ಕಾರಣ ವಿದ್ಯುತ್​ ಸರಬರಾಜು ಮಾಡಿ ಎಂದು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಜೆಸ್ಕಾಂಗೆ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಜೆಸ್ಕಾಂ ಮತ್ತೆ ವಿದ್ಯುತ್​ ಸರಬರಾಜು ಆರಂಭಿಸಿದೆ.

ಇದೀಗ ಜೆಸ್ಕಾಂ ಬಾಕಿ ಬಿಲ್ ​ಪಾವತಿಸುವಂತೆ ನೋಟಿಸ್​ ಮೇಲೆ ನೋಟಿಸ್​ ನೀಡುತ್ತಿದೆ. ಜೆಸ್ಕಾಂ ನೋಟಿಸ್ ನೀಡಿದರು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಮತ್ತು ಉನ್ನತ ಶಿಕ್ಷಣ ಇಲಾಖೆ ಕ್ಯಾರೆ ಎನ್ನುತ್ತಿಲ್ಲ.​ ಹೀಗಾಗಿ ಜೆಸ್ಕಾಂ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ವಿದ್ಯುತ್​ ಸರಬಾರಜು ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಇನ್ನು ವಿಜಯನಗರ ಜಿಲ್ಲೆ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಇತ್ತೀಚಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ತಿಂಗಳೊಳಗೆ ಸಮಸ್ಯೆ ಬಗೆಹರಿಸುವುದಾಗ ಭರವಸೆ ನೀಡಿದೆ. ಆದರೆ ಸಚಿವ ಜಮೀರ್ ಬಂದೋಗಿ 15 ದಿನ ಕಳೆದರು ಬಾಕಿ ಬಿಲ್ ಇನ್ನೂ ಪಾವತಿಯಾಗಿಲ್ಲ. ಹೀಗಾಗಿ ಜೆಸ್ಕಾಂ ನೋಟೀಸ್ ಜಾರಿಮಾಡಿದೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles