ಬೆಳಗಾಯಿತು ವಾರ್ತೆ
ಕೊಟ್ಟೂರು: ಪಟ್ಟಣದ ಬಸ್ ನಿಲ್ದಾಣದ ಹತ್ತಿರ ವೆಂಕಟೇಶ್ವರ ಅಯ್ಯಂಗಾರ್ ಬೇಕರಿಗೆ ಬೆಂಕಿ ತಗುಲಿ ಲಕ್ಷಾಂತ ಬೆಲೆ ಬಾಳುವ ವಸ್ತು ಮತ್ತು ಬೇಕರಿ ಪದಾರ್ಥಾಗಳು ಸುಟ್ಟ ಘಟನೆ ಭಾನುವಾರ
ರಾತ್ರಿ 7 ಗಂಟೆಗೆ ನಡೆದಿದೆ.
ಸ್ಥಳಕ್ಕೆ ಅಗ್ನಿಶಾಮಕದಳ ಧಾವಿಸಿ ಬೆಂಕಿಯನ್ನು ಆರಿಸುವ ಕಾರ್ಯ ನಡೆಸಿದರು. ಬೇಕರಿಯ ಪಕ್ಕದಲ್ಲಿರುವ ಮೊಬೈಲ್ ಶಾಪ್ ಸಂಪೂರ್ಣವಾಗಿ ಸುಟ್ಟಿದ್ದು, ಬಳೆ ಅಂಗಡಿಗು ಬೆಂಕಿ ತಗುಲಿ ಸಾಮಗ್ರಿಗಳು ಸುಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಕೊಟ್ಟೂರು ಪಿ.ಎಸ್.ಐ ಗೀತಾಂಜಲಿ ಸಿಂಧೆ ಭೇಟಿ ನೀಡಿದ್ದಾರೆ. ಅಗ್ನಿ ಶಾಮಕ ದಳ ಸಿಬ್ಬಂದಿ ವರ್ಗದವರು ಬೆಂಕಿಯ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದರು.
ವರದಿ: ಕೊಟ್ರೇಶ್ ತೆಗ್ಗಿನಕೇರಿ..