39.7 C
Bellary
Sunday, April 28, 2024

Localpin

spot_img

ಎಸ್ಎಲ್ಆರ್ ಸಂಸ್ಥೆಯಿಂದ ಆರೋಗ್ಯ ಮೇಳ

ಮರಿಯಮ್ಮನಹಳ್ಳಿ: ಪಟ್ಟಣದ ಸಮೀಪದ ಲೋಕಪ್ಪನಹೊಲದ ಎಸ್.ಎಲ್.ಆರ್. ಮೆಟಾಲಿಕ್ಸ್ ಕಂಪನಿಯು ಸಿ.ಎಸ್.ಆರ್. ಯೋಜನೆಯಡಿಯಲ್ಲಿ ಮೈರಾಡ ಬಳ್ಳಾರಿ ಸಿಡರ್ ಯೋಜನೆ ಢಣಾಪುರ ಹಾಗೂ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಮತ್ತು  ಕುಟುಂಬ ಕಲ್ಯಾಣ ಆರೋಗ್ಯ ಇಲಾಖೆ ಹಗರಿಬೊಮ್ಮನಹಳ್ಳಿ ತಾಲೂಕು ಸಹಯೋಗದಲ್ಲಿ ಮರಬ್ಬಿಹಾಳು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ಬೃಹತ್ ಆರೋಗ್ಯ ಶಿಬಿರವನ್ನು  ಹಮ್ಮಿಕೊಂಡಿತ್ತು. ಶಿಬಿರದಲ್ಲಿ ಒಟ್ಟು 378 ಜನರನ್ನು ತಪಾಸಿಸಲಾಯಿತು.

ರಕ್ತದೊತ್ತಡ, ಮದುಮೇಹ ಪರೀಕ್ಷೆ, ಹೃದಯ ರೋಗ,ಕ್ಯಾನ್ಸರ್ ,ಮೂತ್ರಪಿಂಡ, ನರರೋಗ, ಎಲುಬು ಮತ್ತು ಕೀಲು,ಕಣ್ಣಿನ ತಪಾಸಣೆ ಹಾಗೂ ಸಾಮಾನ್ಯ ಕಾಯಿಲೆಗಳಿಗೆ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಂಡರು. ಅದರಲ್ಲಿ 194 ಜನ ರಕ್ತದೊತ್ತಡ ಮತ್ತು ಮದುಮೇಹ ಕಾಯಿಲೆ ಪರೀಕ್ಷೆಗೆ ಒಳಪಟ್ಟರು,192 ಜನ ಕಣ್ಣಿನ ತಪಾಷಣೆಯಲ್ಲಿ 26 ಜನ ಹೆಚ್ಚಿನ ಚಿಕಿತ್ಸೆ ಗೆ ಶಿಪಾರಸ್ಸು ಮಾಡಿಲಾಯಿತು. ಒಟ್ಟಾರೆ 378 ಜನ ತಪಾಷಣೆಯಲ್ಲಿ ಹೃದಯಸಮಸ್ಯೆ – 5, ನರರೋಗ ಸಮಸ್ಯೆ – 06, ಸಾಮಾನ್ಯ ರೋಗ ಸಮಸ್ಯೆ- 07, ಮೂತ್ರಪಿಂಡ ವೈಫಲ್ಯ ಸಮಸ್ಯೆ- 07 ಮತ್ತು ಎಲುಬು ಮತ್ತು ಕೀಲಿನ ಸಮಸ್ಯೆ ಇರುವವರು 3 ಒಟ್ಟಾರೆಯಾಗಿ 28 ಜನ ಹೆಚ್ಚಿನ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗೆ ಶಿಫಾರಸ್ಸು ಮಾಡಲಾಯಿತು.

ಕಾರ್ಯಕ್ರಮವನ್ನು ಹಗರಿಬೊಮ್ಮನಹಳ್ಳಿ ತಾಲೂಕು ವೈದ್ಯಾಧಿಕಾರಿಯಾದ ಶಿವರಾಜ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ್ ನಾಯಕ್ ಅಧ್ಯಕ್ಷತೆವಹಿಸಿದ್ದರು ಹಾಗೂ ಇತರೆ ಗ್ರಾಮ ಪಂಚಾಯಿತಿ ಸದಸ್ಯರು ಎಸ್ ಎಲ್ ಆರ್ ಕಂಪನಿಯ ಬಿ.ಬಿ ಪಾಟೀಲ್, ಎಸ್ ಎಲ್ ಆರ್ ಮೆಟಲಿಕ್ಸ್ ಕಂಪನಿಯ ವೈದ್ಯಾಧಿಕಾರಿ ಡಾ. ಸೋಮೇಶ್ವರ, ಡಾ.ಶರತ್, ಸಿಎಸ್ಆರ್ ವಿಭಾಗದ ರಾಘವಾಂಕ, ಮರಬ್ಬಿಹಾಳು ಗ್ರಾ.ಪಂ.ಸದಸ್ಯರು, ಸ್ಥಳಿಯ ಮುಖಂಡರು ಉಪಸ್ಥಿತರಿದ್ದರು.

ಮರಬ್ಬಿಹಾಳಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಗ್ರಾಮಸ್ಥರು ಆರೋಗ್ಯ ಶಿಬಿರದ ಸದುಪಯೋಗ ಪಡೆದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles