ಮರಿಯಮ್ಮನಹಳ್ಳಿ:ಪಟ್ಟಣದ ಆರ್ಯವೈಶ್ಯ ಸಮುದಾಯದಿಂದ ಶರನ್ನವರಾತ್ರಿ ನಿಮಿತ್ತ, ನಗರೇಶ್ವರ ದೇವಸ್ಥಾನದಲ್ಲಿ ಶ್ರೀವೆಂಕಟೇಶ್ವರ ಸ್ವಾಮಿಯ ಕಲ್ಯಾಣೋತ್ಸವ ಕಾರ್ಯಕ್ರಮ ಬುಧವಾರ ಹಮ್ಮಿಕೊಂಡಿತ್ತು,ಕೈವಲ್ಯಾಪುರದ ಪುರೋಹಿತರಾದ ಅನಂತಸ್ವಾಮಿಹಾಗು ಸಂಗಡಿಗರಿಂದ ಕಲ್ಯಾಣೋತ್ಸವ ನೆರವೇರಿತು.ಇದರಂಗವಾಗಿ ಶ್ರೀ ವೆಂಕಟೇಶ್ವರಸ್ವಾಮಿಗೆ ಕ್ಷೀರಾಭಿಷೇಕ, ಸುಪ್ರಭಾತ,ಮಹಾಸ್ವಾಮಿಯಲ್ಲಿ ಅನುಜ್ಞೆ, ಸಭಾವಂದನೆ,ವಿಶ್ವಕ್ಸೇನಾರಾಧನೆ,ಗಣಪತಿ ಪೂಜೆ,ಸಂಕಲ್ಪ,ವಾಸುದೇವ ಪುಣ್ಯವಾಚನ, ಮಂಗಳ ದ್ರವ್ಯಪೂಜೆ, ಭೂನೀಳಾ ಸಮೇತ ಶ್ರೀ ವೆಂಕಟೇಶ್ವರ ಸ್ವಾಮಿ ಆರಾಧನೆ, ಅರಿಷಿಣಕುಟ್ಟುವ ಶಾಸ್ತ್ರ,ವರಪರೀಕ್ಷೆ, ನಿಶ್ಚಿತಾರ್ಥ,ಸ್ಕಂದಮಾಲಾ,ಮಾಂಗಲ್ಯಪೂಜೆ ಹಾಗೂ ಮಾಂಗಲ್ಯಧಾರಣೆ,ಅಷ್ಟಾವಧಾನ, ಮಹಾಮಂಗಳಾರತಿ,ಸಂಜೆ ವಿಶೇಷಪೂಜೆ,ರಥೋತ್ಸವ,ಕಾರ್ಯಕ್ರಮದ ನಂತರ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆನಡೆಯಿತು.

