ಬೆಳಗಾಯಿತು ವಾರ್ತೆ | www.belagayithu.in
ದಾವಣಗೆರೆ : ಪಂಚಮಸಾಲಿ ಗುರುಪೀಠದಿಂದ ವಚನಾನಂದ ಸ್ವಾಮೀಜಿ ಅವರನ್ನು ಉಚ್ಛಾಟನೆ ಮಾಡಲಾಗಿದ್ದು, ಧರ್ಮದರ್ಶಿ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ಆರಂಭವಾಗಿರುವ ನಡುವೆ ಶ್ರೀಗಳ ಉಚ್ಛಾಟನೆಯ ನಿರ್ಧಾರಕ್ಕೆ ಪ್ರಮುಖ ಕಾರಣಗಳು ಏನು ಎಂಬುದನ್ನು ಸಮಿತಿ ಬಹಿರಂಗಪಡಿಸಿದ್ದು, ಸಾಲು ಸಾಲು ಆರೋಪಗಳನ್ನು ಮಾಡಿದೆ. ಇದೇ ಕಾರಣಕ್ಕೆ ಪದಚ್ಯುತಿಯ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಸಮರ್ಥಿಸಿಕೊಂಡಿದೆ
ಶ್ರೀಗಳ ಮೇಲೆ ಸಮಿತಿಯ ಆರೋಪಗಳೇನು?
ಪೀಠಾರೋಹಣಕ್ಕೂ ಮೊದಲು ಬೆಂಗಳೂರಿನಲ್ಲಿ ನಡೆಸುತ್ತಿದ್ದ ‘ಶ್ವಾಸ ಕೇಂದ್ರ’ದ ಚಟುವಟಿಕೆಗಳಿಂದ ಸಂಪೂರ್ಣವಾಗಿ ಹೊರಬರುವುದಾಗಿ ಒಪ್ಪಿಕೊಂಡಿದ್ದರೂ, ಪೀಠಕ್ಕೆ ಬಂದ ನಂತರವೂ ಅಲ್ಲಿನ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹರಿಹರದ ಪೀಠದಲ್ಲಿ ನೆಲೆಸಿ ಭಕ್ತರಿಗೆ ದರ್ಶನ ನೀಡುವ ಬದಲು, ನಿರಂತರವಾಗಿ ಬೆಂಗಳೂರಿನ ಶ್ವಾಸ ಕೇಂದ್ರಕ್ಕೆ ಭೇಟಿ ನೀಡುವುದು ಮತ್ತು ಅಲ್ಲಿಯೇ ವಾರಗಟ್ಟಲೆ ವಾಸ್ತವ್ಯ ಹೂಡಿ ವ್ಯವಹಾರ ನಡೆಸುತ್ತಿದ್ದಾರೆ. ಶ್ವಾಸ ಕೇಂದ್ರದ ಸಂಪರ್ಕ ಕಡಿದುಕೊಳ್ಳಲು 24.03.2026 ರವರೆಗೆ ಅಂತಿಮ ಗಡುವು ನೀಡಿದ್ದರೂ, ಅದನ್ನು ಪಾಲಿಸದೆ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ.





