ಬೆಳಗಾಯಿತು ವಾರ್ತೆ
ಬೆಂಗಳೂರು: ರಾಜ್ಯದಲ್ಲಿ ಮಳೆ ಹೆಚ್ಚಾಗಿದ್ದು, ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತಿದೆ. ಹೀಗೆ ಉತ್ಪತ್ತಿಯಾದ ಸೊಳ್ಳೆಗಳು ಕಚ್ಚುವುದರಿಂದ ಡೆಂಗ್ಯೂ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಸೊಳ್ಳೆಗಳಿಂದ ದೂರ ಇರಲು ಮನೆಮದ್ದು ಉಪಯೋಗಿಸಿ ಎಂದು ಕರ್ನಾಟಕ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಮ್ಯಾನುಪ್ಯಾಕ್ಚರ‍್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಡಾ. ಪ್ರಶಾಂತ್ ಆರಾಧ್ಯ ತಿಳಿಸಿದ್ದಾರೆ.
ನಗರದ ಪ್ರಸ್ ಕ್ಲಬ್‌ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಮನೆ ಮದ್ದು ಮಾಡುವ ವಿಧಾನ:
ಎರಡು ಶುಂಟಿ, 10 ಬೆಳ್ಳುಳ್ಳಿ, 2 ಚಕ್ಕೆ, 20ಲವಂಗ, 10 ಬೆವಿನ ಎಲೆ ಈ ಎಲ್ಲವನ್ನು ಒಂದುವರೆ ಲೀಟರ್ ನೀರಿನಲ್ಲಿ ಕುದುಸಿ ಅದು ಒಂದು ಲೀಟರ್‌ಗೆ ಬಂದಮೇಲೆ ಆರಿಸಿ ಅಜ್ವನದ ಎಲೆ ಸಿಕ್ಕಲ್ಲಿ 10 ಎಲೆಗಳನ್ನು ಜಜ್ಜಿ ಅದರ ರಸವನ್ನು ಬೆರೆಸಿ ನಂತರ ನೀರನ್ನು ಒಂದು ಬಾಟಲ್‌ಗೆ ಹಾಕಿ ಮನೆಯ ಎಲ್ಲ ಕಡೆ ಸ್ಪೆç ಮಾಡಿ. ಹಾಗೆ ಮಾಡಿದರೆ ಮನೆಯಲ್ಲಿ ಇರುವ ಸೊಳ್ಳೆ, ಜೀರಳೆ, ಹಲ್ಲಿ ಮತ್ತು ಅನೇಕ ಹುಳಗಳು ಮನೆಯಿಂದ ಹೋರಗೆ ಹೋಗುತ್ತದೆ. ಇದರಿಂದ ಡೆಂಗ್ಯೂ ಬರದ ಹಾಗೆ ತಡೆಯಬಹುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೋ. ಸಮತ ದೇಶಮನೆ, ಡಾ. ಪದ್ಮಾ ನಾಗರಾಜ್, ಡಾ. ನಿರ್ಮಲಾ ಎಲಿಗಾರ್, ಡಾ.ಗುಣವಂತ ಮಂಜುನಾಥ್, ಡಾ. ಪೂರ್ಣಿಮಾ ಜೊಗಿ ಇದ್ದರು.





