35.8 C
Bellary
Saturday, April 26, 2025

Localpin

spot_img

ಅಮೃತ ಭಾರತ ಸ್ಟೇಷನ್ ಯೋಜನೆ: 508 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ; ಬಳ್ಳಾರಿ ಆಯ್ಕೆ

ಬಳ್ಳಾರಿ: ಅಮೃತ ಭಾರತ ಸ್ಟೇಷನ್ ಯೋಜನೆಯಡಿ 508 ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿ ಕಾರ್ಯಕ್ರಮ ಕ್ಕೆ ಭಾನುವಾರ ಸಂಸದ ವೈ. ದೇವೇಂದ್ರಪ್ಪ ಮತ್ತು ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡಿದರು.

ರೈಲು ನಿಲ್ದಾಣ ನಗರದ ಪ್ರಮುಖ ಸಾರಿಗೆ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ರೈಲ್ವೆ ನಿಲ್ದಾಣವು ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ಕಲ್ಕತ್ತಾ ಸೇರಿದಂತೆ ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ.
ಈ ರೈಲ್ವೆ ನಿಲ್ದಾಣ ಐತಿಹಾಸಿಕ ಪರಂಪರೆ ಹೊಂದಿದೆ, ಜೊತೆಗೆ ಆಕರ್ಷಕ ವಾಸ್ತು ವಿನ್ಯಾಸ ಹೊಂದಿದೆ. ಇದೀಗ ಅಮೃತ ಭಾರತ ನಿಲ್ದಾಯೋಜನೆಯಡಿ ಯಲ್ಲಿ ಬಳ್ಳಾರಿ ರೈಲು ನಿಲ್ದಾಣವನ್ನು 17 ಕೋಟಿ ರೂಪಾಯಿ ವೆಚ್ಚದಲ್ಲಿ ಪಾರಂಪರಿಕ ಕಟ್ಟಡದ ವೈಭವನ್ನು ಮರುಸ್ಥಾಪಿಸಿ, ನಿಲ್ದಾಣದ ಇತಿಹಾಸಮತ್ತು ವಾಸ್ತುಶಿಲ್ಪದ ವೈಭವನ್ನು ಮರುಕಳಿಸಲಿದೆ.

ಬಿಸಿಲು ಮತ್ತು ಮಳೆಯಿಂದ ಪ್ರಯಾಣಿಕರ ರಕ್ಷಣೆಗೆಂದು ಪ್ಲಾಟಫಾರ್ಮ್‌ಗಳಿಗೆ ಪೂರ್ಣ ಪ್ರಮಾಣದ ಮೇಲ್ಲಾವಣೆ ಒದಗಿಸಲಾಗುವುದು, ಜನ ದಟ್ಟಣೆಯನ್ನು ತಡೆಗಟ್ಟಲು ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರದೊಂದಿಗೆ ದ್ವಿಚಕ್ರ & ನಾಲ್ಕು ಚಕ್ರದ ವಾಹನಗಳಿಗೆ ಸೂಕ್ತ ಪಾಕಿಂಗ್‌ ವ್ಯವಸ್ಥೆ ಕಲ್ಪಿಸಿ ಸರ್ಕ್ಯುಲೇಟಿಂಗ್ ಏರಿಯಾವನ್ನು ಸುಧಾರಿಸಲಾಗುವುದು. ಸುಂದರವಾದ ಭೂದೃಶ್ಯವು ಪಾರಂಪರಿಕ ನಿಲ್ದಾಣದ ಸೌಂದರ್ಯವನ್ನು ಹೆಚ್ಚಿಸುತ್ತದೆ ಹಾಗೂ ಹೊಸ ಬೋಗಿ ಮತ್ತು ರೈಲು ಸೂಚನಾ ಫಲಕಗಳು ಮತ್ತು ಸಂಕೇತಗಳು ಪ್ರಯಾಣಿಕರಿಗೆ ವಿವಿಧ ಉಪಯುಕ್ತತೆಗಳನ್ನು ಸುಲಭವಾಗಿ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ.

ದಿವ್ಯಾಂಗ ಹಾಗೂ ಹಿರಿಯ ನಾಗರಿಕರ ರೈಲು ಪ್ರಯಾಣವನ್ನು 2 ಅಪ್‌ಗಳು ಹಾಗೂ 2 ಎಸ್ಕಲೇಟರ್ಸಗಳು ಸುಗಮವಾಗಿಸುತ್ತವೆ. ಭವಿಷ್ಯದಲ್ಲಿ ಹೆಚ್ಚಾಗಬಹುದಾದ ಜನ ದಟ್ಟಣೆಗೆ ಸದ್ಯ ಇರುವ 25 ಮೀಟರ್ ಅಗಲದ ಪಾದಾಚಾರಿ ಮೇಲ್ವೇತುವೆಯನ್ನು 12 ಮೀಟರ್‌ಗೆ ವಿಸ್ತರಿಸಲಾಗುವುದು. ಸುಸಜ್ಜಿತ ಪುಡ್ ಕೋರ್ಟ್, ಸುಧಾರಿತ ಒಳಾಂಗಣ ವಿನ್ಯಾಸದ ನಿರೀಕ್ಷಣಾ ಕೊಠಡಿಗಳು ಮತ್ತು ಉಚಿತ ವೈ-ಫೈ ಸೌಲಭ್ಯ ಪ್ರಯಾಣಿಕರಿಗೆ ಉತ್ತಮ ಅನುಭವ ನೀಡಲಿದೆ. ನಿಲ್ದಾಣದಲ್ಲಿ ಇಂಧನ ದಕ್ಷತೆಯ ಎಲ್‌ ಇಡಿ ದೀಪಗಳ ಸ್ಥಾಪನೆಯು ರಾತ್ರಿಯಲ್ಲಿ ಸುತ್ತಮುತ್ತಲಿನ ಪ್ರದೇಶಗಳನ್ನು ಬೆಳಗಿಸುವುದಲ್ಲದೆ ನಿಲ್ದಾಣದ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಬಳ್ಳಾರಿ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವುದರಿಂದ ದೇಶದ ಇತರ ಪ್ರಮುಖ ನಗರ ಮತ್ತು ಪಟ್ಟಣಗಳ ಜೊತೆಗೆ ಸಂಪರ್ಕ ಹೆಚ್ಚುಗಲಿದೆ. ಭವಿಷ್ಯದಲ್ಲಿ ಬಳ್ಳಾರಿ ನಗರವು ಪ್ರವಾಸೋದ್ಯಮ, ವ್ಯಾಪಾರ ಕೇಂದ್ರದ ಪ್ರಮುಖ ನಗರವಾಗಿ ಹೊರಹೊಮ್ಮುವುದರ ಜೊತೆಗೆ ಈ ಭಾಗದ ಆರ್ಥಿಕ ಬೆಳವಣಿಗೆಗೆ ಕಾರಣವಾಗಲಿದೆ.

LEAVE A REPLY

Please enter your comment!
Please enter your name here

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles