ಬೆಳಗಾಯಿತು ವಾರ್ತೆ |www.belagayithu.in
ಆಂದ್ರಪ್ರದೇಶ : ಯುಗಾದಿ ಮಹೋತ್ಸವಗಳಲ್ಲಿ ಶ್ರೀಸ್ವಾಮಿಯವರ ಸ್ಪರ್ಶದರ್ಶನೆಯ ನಿಲ್ಲುವಿಕೆ ಶ್ರೀಶೈಲ ಮಹಾಕ್ಷೇತ್ರದಲ್ಲಿ ಯುಗಾದಿ ಮಹೋತ್ಸವಗಳು ದಿ.06-04-2024 ರಿಂದ ದಿ.10-04-2024 ರವರೆಗೆ ನಡೆಯಲಿವೆ ಎಂದು ದೇವಸ್ಥಾನದ ಉಪ ಕಲೆಕ್ಟರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಡಿ.ಪೆದ್ದಿರಾಜು ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಐದು ದಿನಗಳ ಕಾಲ ನಡೆಯುವ ಈ ಯುಗಾದಿ ಉತ್ಸವಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಭಕ್ತರು ಶ್ರೀಶೈಲ ಕ್ಷೇತ್ರವನ್ನು ಸಂದರ್ಶಿಸಬಹುದೆಂದು ಭಾವಿಸಲಾಗಿದೆ.ಈ ಉತ್ಸವಗಳಿಗೆ ಕರ್ನಾಟಕ ರಾಜ್ಯದಿಂದ ವಿಶೇಷವಾಗಿ ಉತ್ತರ ಕರ್ನಾಟಕದ ಭಕ್ತರು ಮತ್ತು ಮಹಾರಾಷ್ಟ್ರದ ಸೋಲಾಪುರ, ಸಾಂಗ್ಲಿ ಹಾಗೂ ಇತರ ಭಾಗಗಳಿಂದ ಕೂಡ ಭಕ್ತರು ಸೇರುತ್ತಾರೆ. ಹಲವು ಪ್ರದೇಶಗಳಿಂದ ಭಕ್ತರು ಪಾದಯಾತ್ರೆಯೊಂದಿಗೆ ಶ್ರೀಶೈಲಕ್ಕೆ ಆಗಮಿಸುತ್ತಿರುವುದು ವಿಶೇಷವಾಗಿದೆ ಎಂದು ತಿಳಿಸಿರುವ ಅವರು ಯುಗಾದಿ ಮಹೋತ್ಸವಗಳಲ್ಲಿ ಸರ್ವ ಭಕ್ತರಿಗೆ ಅನುಕೂಲವಾದ ದರ್ಶನಕ್ಕಾಗಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಅಲಂಕಾರಿಕ ದರ್ಶನ (ಲಘು ದರ್ಶನ)ವನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಸ್ತ ಭಕ್ತಾಧಿಗಳು ಶ್ರೀ ಭ್ರಮರಾಂಬಾ ಮಲ್ಲಿಕಾರ್ಜುನಸ್ವಾಮಿಯವರ ಅನುಗ್ರಹವನ್ನು ಸದಾ ಪಡೆಯಲಿ ಎಂದು ಡಿ. ಪೆದ್ದಿರಾಜು, ಉಪ ಕಲೆಕ್ಟರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆ ಮೂಲಕ ಹಾರೈಸಿದ್ದಾರೆ.
